ಶುಕ್ರವಾರ, ಏಪ್ರಿಲ್ 23, 2021
30 °C

ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಧೀಶರಿಗೆ ಪತ್ರ, ಆಕಾಶಭವನ ಶರಣ್‌ಗೆ ಎನ್‌ಕೌಂಟರ್ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟ ರೌಡಿಶೀಟರ್ ಆಕಾಶಭವನ ಶರಣ್ ಗೆ ಇದೀಗ ಎನ್ ಕೌಂಟರ್ ಭೀತಿ ಉಂಟಾಗಿದೆ.

ಮಂಗಳೂರಿನ ರೌಡಿಶೀಟರ್ ಆಕಾಶಭವನ ಶರಣ್‌ ಅಲಿಯಾಸ್ ಶರಣ್ ಪೂಜಾರಿ ಸದ್ಯ ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿದ್ದಾನೆ.

ಸುರೇಂದ್ರ ಬಂಟ್ವಾಳ್‌‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆ ತಂದಾಗ ಎನ್‌‌ಕೌಂಟರ್‌ ಮಾಡುತ್ತಾರೆ ಎಂದು ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಆಕಾಶಭವನ ಶರಣ್ ಪತ್ರ ಬರೆದಿದ್ದಾನೆ.

ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸಲಿದ್ದು, ಬಾಡಿ ವಾರಂಟ್‌ ಪಡೆದು ಬಂಟ್ವಾಳ ಪೊಲೀಸರು ಆತನನ್ನು ವಿಚಾರಣೆಗೆ ಕರೆತರಲಿದ್ದಾರೆ.

'ನನ್ನ ಜೀವಕ್ಕೆ ಅಪಾಯವಿದೆ. ವಿಚಾರಣೆಯಿಂದ ವಿನಾಯಿತಿ ನೀಡಿ' ಎಂದು ಶರಣ್‌‌ ಪತ್ರ ಬರೆದಿದ್ದಾನೆ ಎನ್ನಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು