ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಭಾಷಾ ದಿನ 21ಕ್ಕೆ

ಬ್ಯಾರಿ ಅಕಾಡೆಮಿ, ಅಧ್ಯಯನ ಪೀಠದಿಂದ
Last Updated 16 ಫೆಬ್ರುವರಿ 2021, 14:59 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಬ್ಯಾರಿ ಅಧ್ಯಯನ ಪೀಠದ ಸಹಯೋಗದಲ್ಲಿ ‘ವಿಶ್ವ ಸ್ಥಳೀಯ ಭಾಷಾ ದಿನಾಚರಣೆ’ಯು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಫೆ.21ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌ ಹಾಗೂ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಅಬೂಬಕ್ಕರ್ ಸಿದ್ದೀಕ್, ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಿರೀಶ್ ಭಟ್ ಅಜಕ್ಕಳ ಉದ್ಘಾಟಿಸುವರು. ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸುವರು. ವಿಶ್ವವಿದ್ಯಾಲಯ ಕಾಲೇಜು ಪ್ರಾಂಶುಪಾಲ ಡಾ.ಹರೀಶ್ ಎ. ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರಾದ ಡಾ.ನಾಗರತ್ನ ಕೆ.ಎ. ಪಾಲ್ಗೊಳ್ಳುವರು’ ಎಂದು ತಿಳಿಸಿದ್ದಾರೆ.

‘ವಿವಿಧ ಭಾಷೆಗಳ ಸೊಬಗು ಮತ್ತು ಸೊಗಡು ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳಲಿದ್ದು, ಭಾಷಾ ಬಾಂಧವ್ಯಕ್ಕೆ ಒತ್ತು ನೀಡಲಿರುವ ಸೌಹಾರ್ದ ಕಾರ್ಯಕ್ರಮವಾಗಿದೆ’ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ಕಲಾವಿದ ಪುಷ್ಕಳ ಕುಮಾರ್ (ಕನ್ನಡ), ಅತಿಥಿ ಉಪನ್ಯಾಸಕ ಡಾ. ಸುಭಾಶ್ಚಂದ್ರ ಕಣ್ವತೀರ್ಥ (ತುಳು), ಕೊಂಕಣಿ ವಿಭಾಗದ ಸಂಯೋಜಕ ಡಾ. ದೇವದಾಸ್ ಪೈ (ಕೊಂಕಣಿ), ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು (ಬ್ಯಾರಿ), ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕರಾದ ಡಾ. ಮೀನಾಕ್ಷಿ ಎಂ.ಎಂ (ಕೊಡವ), ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ (ಅರೆಭಾಷೆ), ಅತಿಥಿ ಉಪನ್ಯಾಸಕ ಶ್ಯಾಮ್ ಪ್ರಸಾದ್ (ಹವ್ಯಕ), ನಿವೃತ್ತ ಅಧ್ಯಾಪಕಿ ಸುಮಿತ್ರಾ ಜಿ. ಅಚಾರ್ಯ (ಶಿವಳ್ಳಿ), ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ (ಮಲಾಮೆ), ವಿದ್ಯಾರ್ಥಿ ದಿನಕರ ಕೆಂಜೂರು (ಕೊರಗ), ಉಪನ್ಯಾಸಕ ಅರುಣ್ ಉಳ್ಳಾಲ್ (ತೀಯಾ), ಮುಖ್ಯೋಪಾಧ್ಯಾಯಿನಿ ಚಂಚಲಾಕ್ಷಿ (ಮೋಯಾ), ಸಹಾಯಕ ಪ್ರಾಧ್ಯಾಪಕ ಮಹಮ್ಮದ್ ಅವ್ವಾದ್, ಯಕ್ಷಗಾನ ಕಲಾವಿದ ಗಿರೀಶ್ ಐತಾಳ್ ಕರಂಬಳ್ಳಿ (ಕುಂದಾಪುರ ಕನ್ನಡ), ಸಹಾಯಕ ಪ್ರಾಧ್ಯಾಪಕ ಡಾ. ಪ್ರೀತಿ ಕೀರ್ತಿ ಡಿಸೋಜ (ಕ್ರಿಶ್ಚಿಯನ್ ಕೊಂಕಣಿ), ಪ್ರಾಧ್ಯಾಪಕ ಸೈಯದ್ ಅಮೀನ್ (ಉರ್ದು) ಆಯಾ ಭಾಷೆಗಳಲ್ಲಿ ವಿಚಾರ ಮಂಡಿಸಲಿದ್ದಾರೆ. ಕಾರ್ಯಕ್ರಮ ಸಂಯೋಜಕ ಪ್ರೊ. ಹೈದರಾಲಿ ಮತ್ತು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT