ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75,400 ಟನ್ ಮಲೇಷ್ಯಾ ಮರಳು ವಿತರಣೆಯೇ ಆಗಿಲ್ಲ!

Last Updated 8 ಡಿಸೆಂಬರ್ 2022, 20:18 IST
ಅಕ್ಷರ ಗಾತ್ರ

ಮಂಗಳೂರು: ಮರಳು ಕೊರತೆ ನೀಗಿಸಲು ಕೆಲ ವರ್ಷಗಳ ಹಿಂದೆ ಮಲೇಷ್ಯಾದಿಂದ ಆಮದು ಮಾಡಿಕೊಂಡಿರುವ 75,400 ಟನ್ ಮರಳು ವಿತರಣೆ ಆಗದೆ ಹಾಗೇ ಉಳಿದಿದೆ!

‘ಎನ್‌ಎಂಪಿಎ ಆವರಣದಲ್ಲಿ 75,400 ಟನ್ ಮರಳು ಸಂಗ್ರಹ ಇರುವ ವಿಷಯ ನನಗೂ ಅಚ್ಚರಿ ಮೂಡಿಸಿದೆ. ಇದು ಎಂ–ಸ್ಯಾಂಡ್ ಅಲ್ಲವಾಗಿದ್ದರೂ, ಅದಕ್ಕೆ ಸಮಾನ ಉತ್ತಮ ಗುಣಮಟ್ಟ ಹೊಂದಿದೆ. 10 ಟನ್‍ಗೆ ₹ 10 ಸಾವಿರ ದರಕ್ಕೆ ಖರೀದಿದಾರರಿಗೆ ಪೂರೈಕೆ ಮಾಡಲಾಗುವುದು. ಇದಲ್ಲದೆ, ಜಿಲ್ಲೆಯ ವಿವಿಧ ಕಡೆಗಳಲ್ಲಿ ವಶಪಡಿಸಿಕೊಂಡಿರುವ 1,000 ಟನ್ ಮರಳು ಲಭ್ಯವಿದೆ. ಆ ಮರಳನ್ನು ಕೂಡಾ ಲೋಡ್ ಒಂದಕ್ಕೆ ₹ 7,000 ದರದಲ್ಲಿ ನೀಡಲಾಗುವುದು’ ಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ಮಾಹಿತಿ ನೀಡಿದರು.

ನಂತರ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ, ಆಮದುಮರಳು ಪಡೆಯಲು ಆಕರ್ ಎಂಟರ್‌ಪ್ರೈಸಸ್, ನವಮಂಗಳೂರು ಬಂದರು, ಪಣಂಬೂರು (9113907389) ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಆಕರ್ ಎಂಟರ್‌ಪ್ರೈಸಸ್ ಸಂಸ್ಥೆಯು ಮಲೇಷ್ಯಾದಿಂದ 1 ಲಕ್ಷ ಟನ್ ಮರಳನ್ನು ಆಮದು ಮಾಡಿಕೊಂಡು ನವಮಂಗಳೂರು ಬಂದರಿನಲ್ಲಿ ದಾಸ್ತಾನು ಇರಿಸಿತ್ತು. ಇದಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗೆ 2019ರ ಫೆ. 11ರಂದು ನೀಡಿದ ಮಧ್ಯಂತರ ಆದೇಶದಂತೆ, ಹೊರ ರಾಜ್ಯಗಳಿಗೆ ಮರಳು ಸಾಗಣೆ ಪರವಾನಗಿ ವಿತರಿಸಲು ಕ್ರಮವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು 2019ರ ಏ. 12ರಂದು ಪತ್ರದಲ್ಲಿ ತಿಳಿಸಿದ್ದಾರೆ. ಅದರಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2019 ಜೂನ್ 11ರಂದು ಎನ್‌ಎಂಪಿಎದಲ್ಲಿ ದಾಸ್ತಾನು ಮಾಡಿರುವ 1 ಲಕ್ಷ ಟನ್ ಮರಳನ್ನು ಹೊರ ರಾಜ್ಯಗಳಿಗೆ ಸಾಗಣೆ ಮಾಡಲು ಅನುಮತಿ ನೀಡಿತ್ತು. ಆ ಪೈಕಿ 75,400 ಟನ್‌ ಮರಳು ಉಳಿದಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT