ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಪ.ಪೂ ಕಾಲೇಜು: ಮಾನಸಾಗೆ 600 ಅಂಕ

Last Updated 21 ಜುಲೈ 2021, 3:31 IST
ಅಕ್ಷರ ಗಾತ್ರ

ಮಂಗಳೂರು: ಶಕ್ತಿನಗರದ ಶಕ್ತಿ ಕಾಲೇಜಿನ ದ್ವಿತೀಯ ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದ ಮಾನಸ 600 ಅಂಕ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಒಟ್ಟು 47 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 28 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಶ್ರೇಣಿಯಲ್ಲಿ 1 ವಿದ್ಯಾರ್ಥಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದ ಮಾನಸ ಎಸ್.ಬಿ ಪಿಸಿಎಂಬಿಯಲ್ಲಿ 600ರಲ್ಲಿ 600 ಅಂಕ, ರಕ್ಷಿತ್ ಎಸ್.ಬಿ 593, ಶಿವನ್ ವಿ. ನಾಯ್ಕ್‌ 592, ವಂಶಿಕ 589, ಹರ್ಷ ಕೆ.ಆರ್. 579, ಚೇತನಾ 578, ಸಂಜನಾ 581, ಪ್ರಜ್ವಲ್ ವೈ.ಬಿ. 579, ಕೃಷ್ಣ ಚೇತನ್ ಶೆಟ್ಟಿ 575 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 33 ವಿದ್ಯಾರ್ಥಿಗಳಲ್ಲಿ 7 ಮಂದಿ ವಿಶಿಷ್ಟ ಶ್ರೇಣಿ, 20 ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿಯಲ್ಲಿ 6 ಮಂದಿ ತೇರ್ಗಡೆ ಹೊಂದಿದ್ದಾರೆ. ಶಿಖಾ 583, ಪ್ರಮೋದಿನಿ 554, ಮ್ಯೂರಲ್ ಜೆನಿಶಾ ಫುಟಾರ್ಡೊ 552, ಆತ್ಮಿಕ 540, ಶರಣ್ 522, ಸ್ಫೂರ್ತಿ 520, ಕೃಷಿಕ್ ಬಿ.ಡಿ. 518 ಅಂಕ ಪಡೆದಿದ್ದಾರೆ.

ಆಡಳಿತಾಧಿಕಾರಿ ಕೆ.ಸಿ ನಾಯ್ಕ್‌, ಕಾರ್ಯದರ್ಶಿ ಸಂಜೀತ್ ನಾಯ್ಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಕಾಲೇಜು ಪ್ರಾಂಶುಪಾಲ ಟಿ.ರಾಜಾರಾಮ್ ರಾವ್, ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT