ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಮಾನ ನಿಲ್ದಾಣ | ಪಾರ್ಕಿಂಗ್‌ಗಾಗಿ ಎಎನ್‌ಪಿಆರ್‌ ತಂತ್ರಜ್ಞಾನ ಅಳವಡಿಕೆ

Published 15 ಜುಲೈ 2023, 23:30 IST
Last Updated 15 ಜುಲೈ 2023, 23:30 IST
ಅಕ್ಷರ ಗಾತ್ರ

ಮಂಗಳೂರು: ನಗರದ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ಗಾಗಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ಎಎನ್‌ಪಿಆರ್‌) ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು ಫಾಸ್ಟ್ಯಾಗ್‌ನಂಥ ಇ–ಪೇಮೆಂಟ್ ಸೌಲಭ್ಯದ ಮೂಲಕ ಶುಲ್ಕ ಪಾವತಿ ಕಾರ್ಯವನ್ನು ಸರಳಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರ ತಿಳಿಸಿದ್ದಾರೆ. 

ಎಎನ್‌ಪಿಆರ್‌ ಸೌಲಭ್ಯದಡಿ ಅಳವಡಿಸಿರುವ ಉಪಕರಣವು ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವ ವಾಹನದ ನಂಬರ್‌ ದಾಖಲಿಸಿಕೊಳ್ಳುತ್ತದೆ. ವಾಹನವು ನಿಗದಿತ 10 ನಿಮಿಷದಲ್ಲಿ ಹೊರಬಂದರೆ ಗೇಟ್‌ನ ಬೂಮ್‌ ಬ್ಯಾರಿಯರ್‌ ತಾನಾಗಿಯೇ ತೆರೆದುಕೊಳ್ಳುತ್ತದೆ. ಅದಕ್ಕಿಂತ ಹೆಚ್ಚು ಸಮಯ ಒಳಗೆ ಇರಬೇಕು ಎಂದಿದ್ದರೆ ಪಾರ್ಕಿಂಗ್ ಶುಲ್ಕ ಭರಿಸಬೇಕು. ಇದನ್ನು ಡಿಜಿಟಲ್ ಮಾದರಿಯಲ್ಲೂ ನಗದು ರೂಪದಲ್ಲೂ ಪಾವತಿಸಬಹುದಾಗಿದೆ. ಇದಕ್ಕಾಗಿ ನೆಲಮಹಡಿಯಲ್ಲಿರುವ ಫ್ಲ್ಯಾಗ್‌ ಪೋಸ್ಟ್‌ ಬಳಿಯ ಕೇಂದ್ರೀಯ ಪಾವತಿ ಸ್ಟೇಷನ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.  ‌

‘ಮೊದಲೇ ಪಾರ್ಕಿಂಗ್‌ ಶುಲ್ಕ ಭರಿಸಿದರೆ ನಿಗದಿತ ಅವಧಿಗಿಂತ ಹೆಚ್ಚುವರಿ 10 ನಿಮಿಷ ವಾಹನವನ್ನು ವಿಮಾಣ ನಿಲ್ದಾಣದ ಆವರಣದಲ್ಲಿ ನಿಲ್ಲಿಸಲು ಅವಕಾಶ ಇರುತ್ತದೆ. ಹೊರಹೋಗುವಾಗ ಪಾವತಿ ಚೀಟಿಯನ್ನು ಎಕ್ಸಿಟ್ ಬೂತ್‌ನಲ್ಲಿ ಸ್ಕ್ಯಾನ್ ಮಾಡಿಕೊಳ್ಳುವುದಕ್ಕೂ ಅವಕಾಶ ಉಂಟು 30 ನಿಮಿಷ, ಎರಡು ತಾಸು, 8 ತಾಸು, 24 ತಾಸು ಮತ್ತು ಅದಕ್ಕಿಂತ ಹೆಚ್ಚು ಎಂಬ ಸ್ಲಾಟ್‌ಗಳನ್ನು ಪಾರ್ಕಿಂಗ್ ಶುಲ್ಕಕ್ಕೆ ನಿಗದಿ ಮಾಡಲಾಗಿದೆ’ ಎಂದು ವಕ್ತಾರ ವಿವರಿಸಿದ್ದಾರೆ.  ‌

ಫಾಸ್ಟ್ಯಾಗ್ ಮಾದರಿಯಲ್ಲಿ ಶುಲ್ಕ ಪಾವತಿ ಮಾಡುವವರು ಒಳಬರುವ ದಾರಿಯಲ್ಲಿ ಲೇನ್‌ ಎರಡು ಮತ್ತು ಹೊರಹೋಗುವ ದಾರಿಯಲ್ಲಿ ಲೇನ್‌ ಮೂರನ್ನು ಬಳಸಬಹುದಾಗಿದ್ದು ಈ ಲೇನ್‌ಗಳು ತಡೆಯಿಲ್ಲದೆ ವಾಹನಗಳು ಮುಂದೆ ಸಾಗಲು ನೆರವಾಗುತ್ತವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT