ಮಂಗಳೂರು: ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಭಾನುವಾರ (ಜ.12) ಒಟ್ಟು 7,710 ಪ್ರಯಾಣಿಕರು ಬಳಸಿದ್ದು, ಇದು ಹೊಸ ದಾಖಲೆಯಾಗಿದೆ. ಈ ವಿಮಾನ ನಿಲ್ದಾಣವು ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಬಳಿಕ ಒಂದೇ ದಿನದಲ್ಲಿ ನಿರ್ವಹಿಸಿದ ಪ್ರಯಾಣಿಕರ ಗರಿಷ್ಠ ಸಂಖ್ಯೆ ಇದು.

ಭಾನುವಾರ 24 ವಿಮಾನಗಳು ಇಲ್ಲಿ ಇಳಿದಿದ್ದು, 25 ವಿಮಾನಗಳು ಇಲ್ಲಿಂದ ಪ್ರಯಾಣ ಬೆಳೆಸಿವೆ. ಅವುಗಳಲ್ಲಿ 7,613 ಹಿರಿಯರು, 97 ಮಕ್ಕಳು ಪ್ರಯಾಣಿಸಿದ್ದಾರೆ. ವಿಮಾನನಿಲ್ದಾಣದಲ್ಲಿ ಶನಿವಾರವೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇತ್ತು. ಅಂದು 48 ವಿಮಾನಗಳು ಹಾರಾಟ ನಡೆಸಿದ್ದು, ಒಟ್ಟು 7,538 ಪ್ರಯಾಣಿಕರು ಅವುಗಳಲ್ಲಿ ಪ್ರಯಾಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.