ಉದ್ಯಮ ಪರವಾನಗಿ ಕಡ್ಡಾಯ
ಮಂಗಳೂರು ನಗರದಲ್ಲಿ, ಸುತ್ತಮುತ್ತ 300ರಿಂದ 350 ಪಿ.ಜಿ.ಗಳಿವೆ. ಅವುಗಳಲ್ಲಿ 170ಕ್ಕಿಂತಲೂ ಅಧಿಕ ಮಹಿಳೆಯರ ಪಿ.ಜಿ.ಗಳಿವೆ. ಪಿ.ಜಿ. ನಡೆಸಲು ಪಾಲಿಕೆಯ ಆರೋಗ್ಯ ವಿಭಾಗದಿಂದ ಉದ್ಯಮ ಪರವಾನಗಿ (ಟ್ರೇಡ್ ಲೈಸನ್ಸ್) ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಜಾಗದ ಅಥವಾ ಮನೆಯ ಬಾಡಿಗೆ ಒಪ್ಪಂದ, ತೆರಿಗೆ ರಶೀದಿ, ನೆರೆಹೊರೆಯವರಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ), ಆಧಾರ್‌ಕಾರ್ಡ್ ನೀಡಬೇಕು. ಆಹಾರ ಮತ್ತು ಸುರಕ್ಷತಾ ಕಚೇರಿಯಿಂದ ಪರವಾನಗಿ ಪಡೆಯಬೇಕು. ಪಿ.ಜಿ.ಯಲ್ಲಿ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಸುವುದು ಕಡ್ಡಾಯ. ಆಹಾರ ಗುಣಮಟ್ಟ, ನೈರ್ಮಲ್ಯವನ್ನು 6 ತಿಂಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಮಾಹಿತಿ ನೀಡಿದರು.