ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಜಪೆಯ ಒಡ್ಡಿದಕಲದಲ್ಲಿ ಮಂಗಗಳ ಉಪಟಳ

Published 2 ಜುಲೈ 2024, 16:12 IST
Last Updated 2 ಜುಲೈ 2024, 16:12 IST
ಅಕ್ಷರ ಗಾತ್ರ

ಬಜಪೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಡ್ಡಿದಕಲದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದೆ. ಎಂಎಸ್ಇಝಡ್ ಇರುವ ಕೈಗಾರಿಕಾ ವಲಯದ ಸಮೀಪವೇ ಒಡ್ಡಿದಕಲ ಕಾಲೊನಿ ಇದೆ.

ಎಂಎಸ್ಇಝಡ್ ಕಾಂಪೌಂಡ್ ಅನ್ನು ಹಸಿರು ವಲಯವನ್ನಾಗಿ ಮಾಡಿದ್ದು, ಅಲ್ಲಿ ಮರ ಬೆಳೆಸಲಾಗಿದೆ. ಮರಗಳು ದೊಡ್ಡದಾಗಿ ಪಕ್ಕದ ಕಾಲೊನಿಗೆ ವಾಲಿ ನಿಂತಿದೆ. ಮರಗಳ ಮೂಲಕ ಮಂಗಗಳ ಹಿಂಡು ಒಡ್ಡಿದಕಳ ಕಾಲೊನಿಯ ಮನೆಗಳಿಗೆ ನುಗ್ಗಿ ಉಪಟಳ ನೀಡುತ್ತಿವೆ. ಮನೆಗೆ ನುಗ್ಗಿ ಮನೆಯೊಳಗಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿಸುತ್ತಿವೆ.

ತೆಂಗಿನ ಮರ ಏರಿ ಎಳನೀರನ್ನು ಕಿತ್ತು ಹಾಳು ಮಾಡುತ್ತಿವೆ. ಬಟ್ಟೆಗಳನ್ನೂ ಹೊತ್ತೊಯ್ಯುತ್ತಿವೆ.

ಮಂಗಗಳ ಉಪಟಳದ ಬಗ್ಗೆ ಬಜಪೆ ಪಟ್ಟಣ ಪಂಚಾಯಿತಿಗೆ ಮಾಹಿತಿ ನೀಡಿದರೆ ಅರಣ್ಯ ಇಲಾಖೆಗೆ ದೂರು ನೀಡುವಂತೆ ಸೂಚಿಸುತ್ತಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಬೆಳಿಗ್ಗೆ ತಿಂಡಿ ಮಾಡಿದ್ದನ್ನು ತಿನ್ನಲೂ ಮಂಗಗಳು ಬಿಡುತ್ತಿಲ್ಲ. ಮನೆಯ ಟ್ಯಾಂಕ್‌ಗೆ ನೀರು ತುಂಬಿಸಿದ ಕೂಡಲೇ ಖಾಲಿ ಮಾಡುತ್ತವೆ. ಮನೆಯ ಟ್ಯೂಬ್ ಲೈಟ್ ಸಹಿತ ಎಲ್ಲ ವಸ್ತುಗಳನ್ನು ಕಿತ್ತುಹಾಕುತ್ತಿವೆ. ಈ ಬಗ್ಗೆ ಎಂಎಸ್ಇಝಡ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸ್ಪಂದಿಸಿಲ್ಲ ಎಂದು  ಸ್ಥಳೀಯರಾದ ಆರತಿ ದೂರಿದರು.

ದಿನ ಬಳಕೆಗೆಂದು ಇದ್ದ ತೆಂಗಿನ ಮರದಲ್ಲಿದ್ದ ಸಿಯಾಳವನ್ನೆಲ್ಲ ಹಾಳು ಮಾಡುವ ಮಂಗಗಳು ನಮಗೆ ಏನನ್ನೂ ಉಳಿಸುತ್ತಿಲ್ಲ. ಮನೆಯ ಚಾವಣಿ ಏರುವ ಮಂಗಗಳ ಹಿಂದು ಹೆಂಚುಗಳನ್ನು ಪುಡಿ ಮಾಡಿ ಮನೆಯೊಳಗೆ ನುಗ್ಗಿ ಮನೆಯೊಳಗಿದ್ದ ವಸ್ತುಗಳನ್ನೆಲ್ಲ ಕೊಂಡೊಯ್ಯುತ್ತಿವೆ ಎಂದು ಕವಿತಾ ಸಮಸ್ಯೆ ವಿವರಿಸಿದರು.

ಒಡ್ಡಿದಕಲ ಕಾಲೊನಿ
ಒಡ್ಡಿದಕಲ ಕಾಲೊನಿ
ಒಡ್ಡಿದಕಲ ಕಾಲೊನಿಯಲ್ಲಿ ಮಂಗಳು
ಒಡ್ಡಿದಕಲ ಕಾಲೊನಿಯಲ್ಲಿ ಮಂಗಳು
ಒಡ್ಡಿದಕಲ ಕಾಲೊನಿ
ಒಡ್ಡಿದಕಲ ಕಾಲೊನಿ
ಒಡ್ಡಿದಕಲ ಕಾಲೊನಿ
ಒಡ್ಡಿದಕಲ ಕಾಲೊನಿ
ಒಡ್ಡಿದಕಲ ಕಾಲೊನಿ
ಒಡ್ಡಿದಕಲ ಕಾಲೊನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT