ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಮ್ಡ್‌ ಫಾರೆಸ್ಟ್‌ ಪಟ್ಟಿ ಯಾಕಿಲ್ಲ: ಮೂಡುಬಿದಿರೆ ಗ್ರಾಮಸ್ಥರ ಪ್ರಶ್ನೆ

ಮೂಡುಬಿದಿರೆ ತಹಶೀಲ್ದಾರ್‌ ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಪ್ರಶ್ನೆ
Last Updated 22 ಆಗಸ್ಟ್ 2022, 2:56 IST
ಅಕ್ಷರ ಗಾತ್ರ

ಮೂಡುಬಿದಿರೆ: ಅಕ್ರಮ ಸಕ್ರಮ, ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್) ಪ್ರದೇಶದ ಪಟ್ಟಿಯು ಕಾರ್ಕಳದಲ್ಲಿ ಕಂದಾಯ ಇಲಾಖೆಗೆ ಲಭ್ಯವಾಗಿದೆ. ಆದರೆ ಮೂಡುಬಿದಿರೆಯಲ್ಲಿ ಏಕೆ ಸಿಗುತ್ತಿಲ್ಲ? ಎಂದು ಪಡುಮಾರ್ನಾಡಿನ ದಯಾನಂದ ಹೆಗ್ಡೆ ಪ್ರಶ್ನಿಸಿದರು.

ಪಡುಮಾರ್ನಡು ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯದಲ್ಲಿ ಅವರು ಪ್ರಶ್ನಿಸಿದರು.

‘ನಮಗಿನ್ನೂ ಪಟ್ಟಿ ಬಂದಿಲ್ಲ, ಆದಷ್ಟು ಬೇಗನೇ ತಿಳಿದುಕೊಂಡು ಮಾಹಿತಿ ನೀಡಲಾಗುವುದು’ ಎಂದು ನೂತನ ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ತಿಳಿಸಿದರು.

‘ಕೆಲವರಿಗೆ ಹಕ್ಕು ಪತ್ರ ನೀಡಿದ್ದೀರಲ್ಲಾ’ ಎಂಬ ಗ್ರಾಮಸ್ಥರ ಪ್ರಶ್ನೆಗೆ, ‘ಡೀಮ್ಡ್ ಫಾರೆಸ್ಟ್ ಸಮಸ್ಯೆ ಇಲ್ಲದವರಿಗೆ ಹಕ್ಕುಪತ್ರ ನೀಡಲಾಗಿದೆ’ ಎಂದುಕಂದಾಯ ನಿರೀಕ್ಷಕ ಮಂಜುನಾಥ ಸ್ಪಷ್ಟಪಡಿಸಿದರು.

‘10 ಸೆಂಟ್ಸ್‌ ಡಿನೋಟಿಸ್‌ ಆಗಿದೆ. ಇನ್ನೂ 20 ಸೆಂಟ್ಸ್ ಗೆ ಸಹಿ ತೆಗೆದುಕೊಂಡಿದ್ದಾರೆ. ಆದರೆ, ಹಕ್ಕು ಪತ್ರ ಸಿಕ್ಕಿಲ್ಲ ಎಂದು ಕೇಂಪುಲು ದರ್ಖಾಸು ಲೀಲಾ ಪೂಜಾರಿ ಅಹವಾಲು ಸಲ್ಲಿಸಿದರು.

ಇದೇ ಪ್ರದೇಶದ ಶ್ಯಾಮಲಾ ಯಾನೆ ಬೇಬಿ ಶೆಟ್ಟಿ ಅವರು 24 ಸೆಂಟ್ಸ್‌ನಲ್ಲಿ 14 ಸೆಂಟ್ಸ್‌ ಮಾತ್ರ ಲಭ್ಯವಾಗಿದೆ. ಉಳಿದ 10 ಸೆಂಟ್ಸ್‌ಗೆ ಅರ್ಜಿ ಸಲ್ಲಿಸಿದಾಗ ತಹಶೀಲ್ದಾರರು ‘ಅನ್ವಯಿಸುವುದಿಲ್ಲ’ ಎಂಬ ಷರಾ ಬರೆದಿದ್ದಾರೆ ಎಂದು ಗೋಳು ತೋಡಿಕೊಂಡರು.

ಪಡುಮಾರ್ನಾಡು ಗ್ರಾಮದಲ್ಲಿ 35ರಿಂದ 40 ವರ್ಷಗಳಿಂದ ವಾಸ್ತವ್ಯ ಇರುವವರಿಗೂ ಹಕ್ಕು ಪತ್ರ ಸಿಕ್ಕಿಲ್ಲ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಇರುವುದನ್ನು ಬಗೆಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಯಾಣಿ ಹೇಳಿದರು.

ಉಪ ತಹಶೀಲ್ದಾರ್ ತಿಲಕ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಬಿ., ಅರಣ್ಯ ಇಲಾಖೆಯ ಅಶ್ವಿತ್ ಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT