ಗುರುವಾರ , ಜುಲೈ 29, 2021
28 °C
ನೆಲಕ್ಕುರುಳಿದ ವಿದ್ಯುತ್ ಪರಿವರ್ತಕ, ಕಂಬಗಳು

ಮೂಲ್ಕಿಯಲ್ಲಿ ಗಾಳಿ–ಮಳೆ: ಮನೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಲ್ಕಿ: ತಾಲ್ಲೂಕಿನಲ್ಲಿ ಭಾರಿ ಗಾಳಿ ಮಳೆಗೆ ವಿವಿಧೆಡೆ ಹಾನಿಯಾಗಿದೆ. ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯನ ಕಾಡಿನಲ್ಲಿ ಲಕ್ಷ್ಮೀ ಬಾ ಅವರ ಮನೆಯ ಪಕ್ಕದ ಎತ್ತರ ಪ್ರದೇಶದ ಮಣ್ಣು ಕುಸಿದ ಪರಿಣಾಮ, ಮನೆಯ ಆವರಣ ಗೋಡೆ ಕುಸಿದಿದೆ.

ಮನೆಯಲ್ಲಿದ್ದ ಸಾಮಗ್ರಿಗಳಿಗೆ ಹಾನಿಯಾಗಿದ್ದು, ಅಂದಾಜು ₹ 1.5 ಲಕ್ಷ ನಷ್ಟ ಸಂಭವಿಸಿದೆ. ಹಳೆಯಂಗಡಿ ಸಮೀಪದ ಚೇಳ್ಯಾರು ಕಾಲೊನಿಯಲ್ಲಿ ಮಣ್ಣು ಕುಸಿದ ಪರಿಣಾಮ ವಿದ್ಯುತ್ ಪರಿವರ್ತಕ, ಅದಕ್ಕೆ ಹೊಂದಿಕೊಂಡಿರುವ ಐದು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ತೋಕೂರಿನಲ್ಲಿ ಹಿಂದೂಸ್ಥಾನಿ ಸರ್ಕಾರಿ ಶಾಲೆಯ ಬಳಿ ಮರ ಮುರಿದು ಬಿದ್ದು, ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ರಸ್ತೆ ಪಕ್ಕದ ಪುರುಷೋತ್ತಮ ಕೋಟ್ಯಾನ್ ಅವರಿಗೆ ಸೇರಿದ ಆವರಣ ಗೋಡೆಗೆ ಹಾನಿಯಾಗಿದ್ದು, ಕಂದಾಯ ಅಧಿಕಾರಿ ಮೋಹನ್ ಭೇಟಿ ನೀಡಿದರು. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಸರಿಪಡಿಸುವಲ್ಲಿ ಶ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.