ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಸುಳ್ಯ ತಾಲ್ಲೂಕಿನ ಹರಿಹರ ಪಲ್ಲತ್ತಡ್ಕ ಎಂಬಲ್ಲಿ ಸೇತುವೆ ಮೇಲೆ ಇದ್ದ ಮರಗಳನ್ನು ಜೆಸಿಬಿಯಲ್ಲಿ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಜೆಸಿಬಿ ಆಪರೇಟರ್ ಅವರನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಅಪಾಯ ಲೆಕ್ಕಿಸದೇ ಪ್ರವಾಹದ ನೀರಿಗೆ ಧುಮುಕಿ ಮಂಗಳವಾರ ರಕ್ಷಣೆ ಮಾಡಿದ್ದಾರೆ.

ನದಿಯಲ್ಲಿ ತೇಲಿ ಬಂದು ಸೇತುವೆಗೆ ಅಪ್ಪಳಿಸಿದ್ದ ಮರದ ದಿಮ್ಮಿಗಳನ್ನು ಜೆಸಿಬಿ ಆಪರೇಟರ್ ಶರೀಫ್ ತೆರವು ಗೊಳಿಸುವಾಗ ಆಯ ತಪ್ಪಿ ನದಿಗೆ ಬಿದ್ದರು.

ತಕ್ಷಣವೇ ನದಿಗೆ ಹಾರಿದ ಸೋಮಶೇಖರ್ ಕಟ್ಟೆಮನೆ ಅವರು ಶರೀಫ್ ಅವರನ್ನು ರಕ್ಷಿಸಿದರು.

ಕೋಮುದ್ವೇಷದಿಂದ ಹತ್ಯೆಗಳು ನಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟುವ್ಯಕ್ತಿಯೊಬ್ಬರನ್ನು ರಕ್ಷಣೆ ಮಾಡಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೊ ಮಾಡಿದ್ದರು. ಈ ವಿಡಿಯೊವನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಂತಾಮಣಿ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು- ಆಟವಾಡಲು ತೆರಳಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.