ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಬಳ್ಳಾರಿಯಲ್ಲಿ ಪತ್ತೆ

Published 1 ಜೂನ್ 2023, 8:10 IST
Last Updated 1 ಜೂನ್ 2023, 8:10 IST
ಅಕ್ಷರ ಗಾತ್ರ

ಉಳ್ಳಾಲ (ದಕ್ಷಿಣ ಕನ್ನಡ): ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಹರೇಕಳ ಪಂಜಿಲಗುಳಿ ನಿವಾಸಿ ಜಯರಾಜ್ (35) ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾರೆಂದು ತಿಳಿದುಬಂದಿದ್ದು, ಸಂಬಂಧಿಕರು ಬಳ್ಳಾರಿಗೆ ತೆರಳಿದ್ದಾರೆ.

ಮೇ.30 ರಂದು ಗರ್ಭಿಣಿ ಪತ್ನಿ ಯನ್ನು ತವರು ಮನೆಯಲ್ಲಿ ಬಿಟ್ಟು ಬಲ್ಮಠದಲ್ಲಿನ ಸ್ಕ್ಯಾನಿಂಗ್ ಸೆಂಟರ್ ನ ಕೆಲಸಕ್ಕೆ ತೆರಳಿದ್ದ ಜಯರಾಜ್, ಅಲ್ಲಿ ಹಾಜರು ದಾಖಲುಪಡಿಸಿದ್ದಾರೆ. ನಂತರ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದರು.

ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆಮಂದಿ ನಾಪತ್ತೆ ದೂರು ದಾಖಲಿಸಿದ್ದರು. ಮಾಧ್ಯಮಗಳಲ್ಲಿ ಸುದ್ಧಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ರಾಜ್ಯದಾದ್ಯಂತ ಪೊಲೀಸ್ ಇಲಾಖೆಗಳಿಗೆ ಮಾಹಿತಿ ರವಾನಿಸಿದ್ದು, ಮಂಗಳೂರು ವ್ಯಾಪ್ತಿಯಲ್ಲಿ ಹುಡುಕಾಟ ಆರಂಭಿಸಿದ್ದರು. ಸ್ನೇಹಿತರನ್ನು ವಿಚಾರಣೆಗೆ ಕರೆಸಲಾಗಿತ್ತು. ಈ ಮಧ್ಯೆ ಮೇ.31 ರಂದು ಪಡೀಲ್- ನಂತೂರು ರಸ್ತೆ ಬಳಿ ಜಯರಾಜ್ ಉಪಯೋಗಿಸುವ ಸ್ಕೂಟರ್ ಪತ್ತೆಯಾಗಿತ್ತು. ಅದರಲ್ಲಿ ಮೊಬೈಲ್, ಪಸ್೯, ದಾಖಲೆಗಳೆಲ್ಲವೂ ಪತ್ತೆಯಾಗಿತ್ತು. ಇದರಿಂದ ಮನೆಮಂದಿ ಇನ್ನಷ್ಟು ಚಿಂತೆಗೀಡಾಗಿದ್ದರು. ಇಂದು ಮಧ್ಯಾಹ್ನ ಹೊತ್ತಿಗೆ ಬಳ್ಳಾರಿ ಪೊಲೀಸರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಯನ್ನು ಸಂಪರ್ಕಿಸಿ ಜಯರಾಜ್ ಬಳ್ಳಾರಿಯಲ್ಲಿದ್ದು, ಅಲ್ಲಿಗೆ ಬಂದು ಕರೆದೊಯ್ಯಲು ತಿಳಿಸಿದ್ದಾರೆ. ಸಂಬಂಧಿಕರು ಹಾಗೂ ಪೊಲೀಸರು ಬಳ್ಳಾರಿಗೆ ಹೊರಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT