ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಟೆಂಪೊ ಡಿಕ್ಕಿ: ಪಾದಚಾರಿ ಸಾವು

Published 20 ಜೂನ್ 2024, 7:12 IST
Last Updated 20 ಜೂನ್ 2024, 7:12 IST
ಅಕ್ಷರ ಗಾತ್ರ

ಮಂಗಳೂರು: ಕುಲಶೇಖರದ ಸಮೀಪ ಟೆಂಪೊ ಡಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತರನ್ನು ರಾಧಾಕೃಷ್ಣ ರಾವ್‌ ಎಂದು ಗುರುತಿಸಲಾಗಿದೆ. ಅವರು ಕಲ್ಪನೆ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದು ಹೋಗುತ್ತಿದ್ದಾಗ ಕಾರ್ಮಿಕ ಕಾಲೊನಿ ಕಡೆಯಿಂದ ಬಂದ ಅಶೋಕ್‌ ಲೇಲ್ಯಾಂಡ್‌ ಟೆಂಪೊ  ಡಿಕ್ಕಿ ಹೊಡೆದಿತ್ತು. ನೆಲಕ್ಕೆ ಬಿದ್ದ ಅವರನ್ನು ತುಸು ದೂರಕ್ಕೆ ಎಳೆದೊಯ್ದಿತ್ತು. ಅವರ ಮೊಣಕಾಲು, ಮುಖ, ಹೊಟ್ಟೆ ಹಾಗೂ ಮರ್ಮಾಂಗದ ಬಳಿ ಗುದ್ದಿದ  ಗಾಯವಾಗಿತ್ತು. ಗಾಯಾಳುವನ್ನು ಸ್ಥಳೀಯರು ಉಪಚರಿಸಿ, ಡಿಕ್ಕಿ ಹೊಡೆದ ಟೆಂಪೊದಲ್ಲೇ ಕರೆದೊಯ್ದು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿ ಪುನೀತ್ ಗೋಪಾಲ್‌ ಬಂಗೇರ ಎಂಬುವರು ದೂರು ನೀಡಿದ್ದು, ಟೆಂಪೊ ಚಾಲಕ ಯಂಕಣ್ಣ ತುಳಸಿಗೇರಿ ವಿರುದ್ಧ ಸಂಚಾರ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT