ಪ್ರೊ–ಕಬಡ್ಡಿ ಆಟಗಾರ ಪ್ರಶಾಂತ್ ರೈ ಕುಕ್ಕೆ ಭೇಟಿ

7

ಪ್ರೊ–ಕಬಡ್ಡಿ ಆಟಗಾರ ಪ್ರಶಾಂತ್ ರೈ ಕುಕ್ಕೆ ಭೇಟಿ

Published:
Updated:
Deccan Herald

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ ಭೇಟಿ ಶನಿವಾರ ನೀಡಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ದೇವರ ದರ್ಶನ ಪಡೆದು, ಆಶ್ಲೇಷಬಲಿ ಸೇವೆ ನೆರವೇರಿಸಿದರು.

ದೇವಳಕ್ಕೆ ಆಗಮಿಸಿದ ಇವರನ್ನು ಶ್ರೀ ದೇವಳದ ಆಡಳಿತ ಮಂಡಳಿ ಸದಸ್ಯ ಕೃಷ್ಣಮೂರ್ತಿ ಭಟ್ ಸ್ವಾಗತಿಸಿದರು. ಬಳಿಕ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದೇವರ ದರ್ಶನ ಪಡೆದರು. ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್, ಪ್ರಶಾಂತ್ ರೈ ಅವರ ಪತ್ನಿ ವಜ್ರೇಶ್ವರಿ.ಪಿ.ರೈ, ಮಗ ಶತಾಯು, ಕಬಡ್ಡಿ ಆಟಗಾರ ಪುರುಷೋತ್ತಮ್, ಕ್ರೀಡಾಳು ಅಮೃತಾ ಏನೆಕಲ್ ಉಪಸ್ಥಿತರಿದ್ದರು.

ಅ.6ರಿಂದ ಪ್ರೊ ಕಬಡ್ಡಿ ಆರಂಭ: ಪ್ರೊ–ಕಬಡ್ಡಿಯ ಆರನೇ ಆವೃತ್ತಿಯು ಅ.5ರಿಂದ ಜನವರಿ 06ವರೆಗೆ ನಡೆಯಲಿದೆ. ನಾನು ಯುಪಿ ಯೋಧ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಪ್ರಥಮ ಬಾರಿಗೆ ಯುಪಿ ಯೋಧಾದಲ್ಲಿ ಕಣಕ್ಕಿಳಿಯುತ್ತಿದ್ದೇನೆ. ಕಳೆದ ಬಾರಿ ₹21 ಲಕ್ಷಕ್ಕೆ ಹರಿಯಾಣ ತಂಡ ನನ್ನನ್ನು ಖರೀದಿಸಿತ್ತು. ಆದರೆ ದೇವರ ಆಶೀರ್ವಾದದಿಂದ ₹79ಲಕ್ಷ ಅತ್ಯಧಿಕ ಎರಡನೇ ಬಿಡ್‍ನಲ್ಲಿ ನಾನು ಯುಪಿ ಯೋಧಾ ತಂಡದ ಪಾಲಾದೆ. ಅಗಸ್ಟ್ 15ರಿಂದ ನಾಸಿಕ್‍ನಲ್ಲಿ ತರಬೇತಿ ಆರಂಭವಾಗಲಿದೆ’ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !