ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾ ಮಳೆಗೆ ತತ್ತರಿಸಿದ ಕುಕ್ಕೆ

ಭಾರಿ ಮಳೆಯಿಂದ ತುಂಬಿ ಹರಿದ ದರ್ಪಣ ತೀರ್ಥ
Last Updated 23 ಸೆಪ್ಟೆಂಬರ್ 2019, 14:54 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆಸುಬ್ರಹ್ಮಣ್ಯ ಪರಿಸರದಲ್ಲಿ ಸೋಮವಾರ ಸಂಜೆ ಗುಡುಗು ಸಿಡಿಲಿನಿಂದ ಒಂದೇ ಸಮನೆ ಸುರಿದ ಉತ್ತರಾ ನಕ್ಷತ್ರದ ಮಳೆಗೆ ದರ್ಪಣ ತೀರ್ಥ ನದಿಯು ತುಂಬಿ ಹರಿಯಿತು.

ನದಿಯಲ್ಲಿ ಪ್ರವಾಹ ಬಂದುದರಿಂದ ನೀರು ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣವನ್ನು ಪ್ರವೇಶಿಸಿತ್ತು. ನದಿ ತಟದಲ್ಲಿ ನಿರ್ಮಿಸಿದ್ದ ಗೋಪುರವು ಮುಕ್ಕಾಲು ಭಾಗ ಮುಳುಗಿತ್ತು. ಕುಕ್ಕೆಸುಬ್ರಹ್ಮಣ್ಯದಿಂದ ಆದಿಸುಬ್ರಹ್ಮಣ್ಯ ಸಂಪರ್ಕಿಸುವ ಸೇತುವೆಯು ಮುಳುಗಡೆಗೊಂಡಿತ್ತು. ಎರಡು ಗಂಟೆ ಸುರಿದ ಮಳೆಗೆ ಉಕ್ಕಿ ಹರಿದ ಪ್ರವಾಹ , ಮಳೆ ನಿಂತೊಡನೆ ಪ್ರವಾಹವು ಇಳಿಕೆಯಾಯಿತು.

ದರ್ಪಣತೀರ್ಥ: ಉತ್ತರಾ ಮಳೆಗೆ ಪ್ರತಿವರ್ಷ ದರ್ಪಣ ತೀರ್ಥ ನದಿಯಲ್ಲಿ ಮಾತ್ರ ನೀರು ತುಂಬಿ ಹರಿಯುತ್ತದೆ. ಪ್ರವಾಹ ಅಧಿಕವಾಗಿ ವಸತಿಗೃಹ, ಮನೆ, ಕೃಷಿ ತೋಟ, ಅಂಗಡಿಗಳಿಗೆ ನೀರು ನುಗ್ಗಿತ್ತು. ಅನಿರೀಕ್ಷಿತ ಪ್ರವಾಹ ಜನರಲ್ಲಿ ಆತಂಕ ಮೂಡಿಸಿತು.

ರಸ್ತೆ ಬಂದ್: ಆದಿಸುಬ್ರಹ್ಮಣ್ಯ ರಸ್ತೆಯು ಸಂಪೂರ್ಣ ನೀರಿನಿಂದ ಆವೃತ್ತವಾಗಿತ್ತು. ಇಲ್ಲಿನ ಅಂಗಡಿ, ಹೋಟೆಲ್‍ಗಳಿಗೆ ನೀರು ನುಗ್ಗಿತ್ತು. ದೇವರಗದ್ದೆ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT