ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 79.4 ಮಿಲಿ ಮೀಟರ್ ಮಳೆಯಾಗಿದೆ. ಶನಿವಾರ ಬೆಳಿಗ್ಗೆಯಿಂದ ಮಳೆ ತಗ್ಗಿದ್ದು, ಮೋಡ ಕವಿದ ವಾತಾವರಣವಿದೆ.

ಬಂಟ್ವಾಳ ತಾಲ್ಲೂಕಿನಲ್ಲಿ ಅತ್ಯಧಿಕ 108.7 ಮಿ.ಮೀ. ಮಳೆ ಬಿದ್ದಿದೆ. ಮಂಗಳೂರು ನಗರ ಸೇರಿದಂತೆ ಮಂಗಳೂರು ತಾಲ್ಲೂಕಿನಲ್ಲಿ 96.8 ಮಿ.ಮೀ., ಸುಳ್ಯ ತಾಲ್ಲೂಕಿನಲ್ಲಿ 85 ಮಿ.ಮೀ., ಬೆಳ್ತಂಗಡಿ ತಾಲ್ಲೂಕಿನಲ್ಲಿ 63 ಮಿ.ಮೀ. ಮತ್ತು ಪುತ್ತೂರು ತಾಲ್ಲೂಕಿನಲ್ಲಿ 43.3 ಮಿ.ಮೀ. ಮಳೆಯಾಗಿದೆ. 2018ರ ಜುಲೈ 20ರಂದು ಜಿಲ್ಲೆಯಲ್ಲಿ 84.2 ಮಿ.ಮೀ. ಮಳೆಯಾಗಿತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಘಟಕ ತಿಳಿಸಿದೆ.

ವಾಡಿಕೆ ಪ್ರಕಾರ ಜಿಲ್ಲೆಯಲ್ಲಿ ಜುಲೈ 20ರ ವೇಳೆಗೆ 3,912.2 ಮಿ.ಮೀ ಮಳೆ ಬೀಳುತ್ತಿತ್ತು. ಕಳೆದ ವರ್ಷ ಈ ವೇಳೆಗೆ 2,690 ಮಿ.ಮೀ ಮಳೆ ಬಿದ್ದಿತ್ತು. ಈ ಬಾರಿ ಕೇವಲ 1,056.9 ಮಿ.ಮೀ ಮಳೆಯಾಗಿದೆ. ವಾಡಿಕೆಗೆ ಹೋಲಿಸಿದರೆ 2,855.3 ಮಿ.ಮೀ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ 1,633.1 ಮಿ.ಮೀ. ಮಳೆ ಕೊರತೆ ಉಂಟಾಗಿದೆ.

ನೇತ್ರಾವತಿ ನದಿಯ ನೀರಿನ ಮಟ್ಟ ಉಪ್ಪಿನಂಗಡಿ ಬಳಿ 13 ಮೀಟರ್ (ಗರಿಷ್ಠ 29.5 ಮೀಟರ್) ಮತ್ತು ಬಂಟ್ವಾಳ ಬಳಿ 5.5 ಮೀಟರ್ (ಗರಿಷ್ಠ 8.5 ಮೀ) ತಲುಪಿದೆ. ಕುಮಾರಧಾರ ನದಿಯ ನೀರಿನ ಮಟ್ಟ ಉಪ್ಪಿನಂಗಡಿ ಬಳಿ 13 ಮೀಟರ್ (ಗರಿಷ್ಠ 28.5 ಮೀ) ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.