ಸೋಮವಾರ, ಏಪ್ರಿಲ್ 12, 2021
24 °C

ಕರಾವಳಿ: ದಕ್ಷಿಣ ಕನ್ನಡದಲ್ಲಿ 79.4 ಮಿ.ಮೀ. ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 79.4 ಮಿಲಿ ಮೀಟರ್‌ ಮಳೆಯಾಗಿದೆ. ಶನಿವಾರ ಬೆಳಿಗ್ಗೆಯಿಂದ ಮಳೆ ತಗ್ಗಿದ್ದು, ಮೋಡ ಕವಿದ ವಾತಾವರಣವಿದೆ.

ಬಂಟ್ವಾಳ ತಾಲ್ಲೂಕಿನಲ್ಲಿ ಅತ್ಯಧಿಕ 108.7 ಮಿ.ಮೀ. ಮಳೆ ಬಿದ್ದಿದೆ. ಮಂಗಳೂರು ನಗರ ಸೇರಿದಂತೆ ಮಂಗಳೂರು ತಾಲ್ಲೂಕಿನಲ್ಲಿ 96.8 ಮಿ.ಮೀ., ಸುಳ್ಯ ತಾಲ್ಲೂಕಿನಲ್ಲಿ 85 ಮಿ.ಮೀ., ಬೆಳ್ತಂಗಡಿ ತಾಲ್ಲೂಕಿನಲ್ಲಿ 63 ಮಿ.ಮೀ. ಮತ್ತು ಪುತ್ತೂರು ತಾಲ್ಲೂಕಿನಲ್ಲಿ 43.3 ಮಿ.ಮೀ. ಮಳೆಯಾಗಿದೆ. 2018ರ ಜುಲೈ 20ರಂದು ಜಿಲ್ಲೆಯಲ್ಲಿ 84.2 ಮಿ.ಮೀ. ಮಳೆಯಾಗಿತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಘಟಕ ತಿಳಿಸಿದೆ.

ವಾಡಿಕೆ ಪ್ರಕಾರ ಜಿಲ್ಲೆಯಲ್ಲಿ ಜುಲೈ 20ರ ವೇಳೆಗೆ 3,912.2 ಮಿ.ಮೀ ಮಳೆ ಬೀಳುತ್ತಿತ್ತು. ಕಳೆದ ವರ್ಷ ಈ ವೇಳೆಗೆ 2,690 ಮಿ.ಮೀ ಮಳೆ ಬಿದ್ದಿತ್ತು. ಈ ಬಾರಿ ಕೇವಲ 1,056.9 ಮಿ.ಮೀ ಮಳೆಯಾಗಿದೆ. ವಾಡಿಕೆಗೆ ಹೋಲಿಸಿದರೆ 2,855.3 ಮಿ.ಮೀ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ 1,633.1 ಮಿ.ಮೀ. ಮಳೆ ಕೊರತೆ ಉಂಟಾಗಿದೆ.

ನೇತ್ರಾವತಿ ನದಿಯ ನೀರಿನ ಮಟ್ಟ ಉಪ್ಪಿನಂಗಡಿ ಬಳಿ 13 ಮೀಟರ್‌ (ಗರಿಷ್ಠ 29.5 ಮೀಟರ್‌) ಮತ್ತು ಬಂಟ್ವಾಳ ಬಳಿ 5.5 ಮೀಟರ್‌ (ಗರಿಷ್ಠ 8.5 ಮೀ) ತಲುಪಿದೆ. ಕುಮಾರಧಾರ ನದಿಯ ನೀರಿನ ಮಟ್ಟ ಉಪ್ಪಿನಂಗಡಿ ಬಳಿ 13 ಮೀಟರ್‌ (ಗರಿಷ್ಠ 28.5 ಮೀ) ತಲುಪಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು