ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ತಲಪಾಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಮನವಿ

Last Updated 25 ಫೆಬ್ರುವರಿ 2023, 4:48 IST
ಅಕ್ಷರ ಗಾತ್ರ

ಉಳ್ಳಾಲ: ತಲಪಾಡಿ ಗ್ರಾಮಕ್ಕೆ ಕೂಡಲೇ ಕುಡಿಯುವ ನೀರು ಪೂರೈಕೆ ಆರಂಭಿಸಲು ಒತ್ತಾಯಿಸಿ ತಲಪಾಡಿ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಉಳ್ಳಾಲ ತಹಶೀಲ್ದಾರ್ ಮತ್ತು ತಲಪಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಬಟ್ಟಪಾಡಿ ಪ್ರದೇಶದಿಂದ ಇಲ್ಲಿಗೆ ನೀರಿನ ಪೈಪ್‌ಲೈನ್ ಇದ್ದರೂ ನೀರು ಸರಬರಾಜು ಆಗುತ್ತಿಲ್ಲ. ಪೈಪ್‌ಲೈನ್ ಇಲ್ಲದಿರುವ ಕೆ.ಸಿ ರೋಡ್, ಪಳ್ಳ, ಪೂಮಣ್ಣು, ಕೆ.ಸಿ. ನಗರ, ಶಾಂತಿ ನಗರ ಮುಂತಾದ ಪ್ರದೇಶಗಳಲ್ಲೂ ನೀರಿನ ಅಭಾವ ಕಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ.ಎ.ಟಿ ಅಬ್ದುಲ್ ಖಾದರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಬಿ.ಎಸ್ ಇಸ್ಮಾಯಿಲ್, ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಲಾಂ ಕೆ.ಸಿ ರೋಡ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸುರೇಖಾ, ಸಿದ್ದಿಕ್ ಕೊಳಂಗರೆ, ಗ್ರಾ.ಪಂ ಸದಸ್ಯ ವೈಭವ್ ಶೆಟ್ಟಿ, ವಿನು ಶೆಟ್ಟಿ, ಮಖ್ಯಾರ್ ಖಾದರ್, ಟಿ.ಎಂ. ಇಬ್ರಾಹಿಂ, ಯಾಕೂಬ್ ಪಿಲಿಕೂರು, ಗೋಪಾಲ್ ತಲಪಾಡಿ, ಇಬ್ರಾಹಿಂ ಕೆಸಿ ರೋಡ್, ಸೋಷಿಯಲ್ ಫಾರೂಕ್, ಅಶ್ರಫ್ ಕೆ.ಸಿ ನಗರ, ಸಲಾಂ ಪಿಲಿಕೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT