ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿಂಜೆ: ರಸ್ತೆ ಅಭಿವೃದ್ಧಿ, ಕೆರೆ ಅಭಿವೃದ್ಧಿಗೆ ಶಿಲಾನ್ಯಾಸ

Last Updated 11 ಮಾರ್ಚ್ 2023, 14:59 IST
ಅಕ್ಷರ ಗಾತ್ರ

ಸುರತ್ಕಲ್: ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಕಟಿಬದ್ಧವಾಗಿದ್ದು, ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುತ್ತಿದೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು‌‌.

ಸೂರಿಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರಿಂಜೆ ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ, ಕೆರೆ ಅಭಿವೃದ್ಧಿಯ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ವಿವಿಧ ಇಲಾಖೆಗಳ ಮೂಲಕ ಸೂರಿಂಜೆ ಪಂಚಾಯಿತಿಯಲ್ಲಿ ₹30 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿಪಡಿಸಲಾಗಿದೆ’ ಎಂದರು.

ಪಂಚಾಯಿತಿ ಅಧ್ಯಕ್ಷ ಜೀತೇಂದ್ರ ಶೆಟ್ಟಿ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯ ದಿವಾಕರ ಶೆಟ್ಟಿ, ದೇವಸ್ಥಾನದ ತಂತ್ರಿ ವಿಜಯದಾಸ ಅಚಾರ್ಯ, ಶ್ರೀಕಾಂತ್ ಭಟ್, ಶ್ರೀನಿವಾಸ ಅಸ್ರಣ್ಣ, ಪೊನ್ನಗಿರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಕೇಶ್ ಶೆಟ್ಟಿ ಬೈಲಗುತ್ತು, ಸದಸ್ಯರಾದ ಜಯಶೀಲ ಸೂರಿಂಜೆ, ವಸುಧಾ ಅನಿಲ್ ಶೆಟ್ಟಿ, ಕರುಣಾಕರ ಶೆಟ್ಟಿ ಅಡಿಮಾರುಗುತ್ತು, ಶೇಖರ್ ಶೆಟ್ಟಿ ಕಲ್ಪವೃಕ್ಷ , ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಸಂತ್, ಬಿಜೆಪಿ ಮುಖಂಡರಾದ ಬೋಜರಾಜ್ ಶೆಟ್ಟಿ ಸೂರಿಂಜೆ, ಮನೋಹರ ಶೆಟ್ಟಿ ಸೂರಿಂಜೆ, ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಶಶಿಧರ ಶೆಟ್ಟಿ ಸೂರಿಂಜೆ, ಪರಶುರಾಮ ಶೆಟ್ಟಿ ಸೂರಿಂಜೆ, ದಿನೇಶ್ ಕುಲ್ಲಂಗಾಲು, ಗಿರೀಶ್ ಕೋಟೆ, ಸಂಪತ್ ಕೋಟೆ, ಮಹಾಬಲ ಸಾಲ್ಯಾನ್, ರಾಧಾಕೃಷ್ಣ ಭಂಡಾರ್ಕರ್, ವಾಮನ ಶೆಟ್ಟಿ ಸೂರಿಂಜೆ, ಪ್ರದೀಪ್ ಕನಕಬೆಟ್ಟು, ಇಮ್ತಿಯಾಝ್, ನವಾಜ್, ಪುಷ್ಪರಾಜ್ ಶೆಟ್ಟಿ, ಗುತ್ತಿಗೆದಾರ ಮುಗ್ರೋಡಿ ಕನ್‌ಸ್ಟ್ರಕ್ಷನ್ ಮಾಲಕ ಸುಧಾಕರ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT