ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಯಾಂಡ್ಸ್ ಪಿಟ್‌: ಸರ್ಕಾರಿ ಶಾಲೆ ಕೊಠಡಿ ಉದ್ಘಾಟನೆ

Published 9 ಜುಲೈ 2024, 6:25 IST
Last Updated 9 ಜುಲೈ 2024, 6:25 IST
ಅಕ್ಷರ ಗಾತ್ರ

ಮಂಗಳೂರು: ಬೆಂಗ್ರೆ ವಾರ್ಡಿನ ಸ್ಯಾಂಡ್ಸ್ ಪಿಟ್‌ನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಶಾಲಾ ಕೊಠಡಿ ಯೋಜನೆಯಡಿ ನಿರ್ಮಿಸಿದ್ದ ಎರಡು ತರಗತಿಗಳ ಕೊಠಡಿಗಳನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.

‘ನಾನೂ ಸರ್ಕಾರಿ ಶಾಲೆಯಲ್ಲೇ ಕಲಿತವನು. ಸರ್ಕಾರಿ ಶಾಲೆಗಳ ಅಭಿವೃದ್ಧಿಯ ವಿಷಯದಲ್ಲಿ ನನ್ನ ನಿಲುವು ಅಚಲ. ಈ ಶಾಲೆಯ ಕೊಠಡಿಗಳೂ ಸೇರಿದಂತೆ ಒಟ್ಟು 35 ಕೊಠಡಿಗಳನ್ನು ವಿವೇಕ ಕೊಠಡಿ ಯೋಜನೆಯಡಿ  ನನ್ನ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ’ ಎಂದು ಕಾಮತ್‌ ತಿಳಿಸಿದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ,  ಪಾಲಿಕೆ ಸದಸ್ಯರಾದ ಮನೋಹರ್ ಕದ್ರಿ, ಕಿಶೋರ್ ಕೊಟ್ಟಾರಿ, ಮುನೀಬ್, ಪ್ರಮುಖರಾದ ಗಂಗಾಧರ್ ಸಾಲ್ಯಾನ್, ಮೀರಾ ಕರ್ಕೇರ, ಪುಂಡಲೀಕ ಮೈಂದರ್, ಸಂಧ್ಯಾ ಸುವರ್ಣ, ಮಾಧವ ಸುವರ್ಣ, ರಾಕೇಶ್ ಸಾಲ್ಯಾನ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT