ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಸಾಹಸ ಕ್ರೀಡೆಗೆ ಉತ್ತಮ ಭವಿಷ್ಯ: ಯು.ಟಿ. ಖಾದರ್

ಸಸಿಹಿತ್ಲು ಬೀಚ್‌ನಲ್ಲಿ ಅಂತರರಾಷ್ಟ್ರೀಯ ಸ್ಟ್ಯಾಂಡ್ ಆಪ್ ಪ್ಯಾಡ್ಲಿಂಗ್‌ ಚಾಂಪಿಯನ್‌ಷಿಪ್‌ ಆರಂಭ
Published 8 ಮಾರ್ಚ್ 2024, 14:24 IST
Last Updated 8 ಮಾರ್ಚ್ 2024, 14:24 IST
ಅಕ್ಷರ ಗಾತ್ರ

ಮೂಲ್ಕಿ: ಕಡಲಿನಲ್ಲಿ ನಡೆಸುವ ಜಲಸಾಹಸ ಕ್ರೀಡೆಯಾದ ಸರ್ಫಿಂಗ್‌ಗೆ ಉತ್ತಮ ಭವಿಷ್ಯವಿದ್ದು ಕರ್ನಾಟಕದ ಕರಾವಳಿಯ ತೀರಗಳು ಇದಕ್ಕೆ ಪೂರಕ ವಾತಾವರಣ ಹೊಂದಿವೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಅಸೋಸಿಯೇಷನ್ ಆಫ್ ಪ್ಯಾಡಲ್ ಸರ್ಫ್‌ ಪ್ರೋಫೆಷನಲ್ಸ್ (ಎಪಿಪಿ), ಸರ್ಫಿಂಗ್‌ ಸ್ವಾಮಿ ಫೌಂಢೇಷನ್ ಸಹಯೋಗದಲ್ಲಿ ಮೂಲ್ಕಿಯ ಸಸಿಹಿತ್ಲು ಬೀಚ್‌ನಲ್ಲಿ ಅಯೋಜಿಸಿರುವ ಅಂತರರಾಷ್ಟ್ರೀಯ ಸ್ಟ್ಯಾಂಡ್ ಆಪ್ ಪ್ಯಾಡ್ಲಿಂಗ್‌ ಚಾಂಪಿಯನ್‌ಷಿಪ್‌ಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಫಿಂಗ್‌ ಉತ್ತಮ ಕೊಡುಗೆ ನೀಡಬಲ್ಲುದು. ಇಲ್ಲಿನ ತೀರಗಳು ಈ ಮೂಲಕ ಪ್ರಸಿದ್ಧಿ ಪಡೆಯಬಹುದಾಗಿದೆ. ಅಡ್ಯಾರ್‌, ಹರೇಕಳದಲ್ಲೂ ಸರ್ಫಿಂಗ್‌ ಚಟುವಟಿಕೆ ನಡೆಸಲು ಪೂರಕ ವಾತಾವರಣ ನಿರ್ಮಿಸಲಾಗುವುದು. ಸಾಂಸ್ಕೃತಿಕವಾಗಿ ಬೆಳೆದಿರುವ ದೇಶ ಜಲಕ್ರೀಡೆಯ ಮೂಲಕ ಕೂಡ ಗಮನ ಸೆಳೆಯುವಂತಾಗಬೇಕು. ಅದರೊಂದಿಗೆ ಗ್ರಾಮೀಣ ಬದುಕು ವಿಶ್ವಮಟ್ಟಕ್ಕೆ ಏರಬೇಕು ಎಂದು ಅವರು ಆಶಿಸಿದರು.

ಶಾಸಕರಾದ ಉಮಾನಾಥ ಕೋಟ್ಯಾನ್, ಮಂಜುನಾಥ ಭಂಡಾರಿ, ಉದ್ಯಮಿ ಪ್ರಕಾಶ್ ಶೆಟ್ಟಿ, ಮುಖಂಡರಾದ ಕೆ.ಅಭಯಚಂದ್ರ ಜೈನ್, ಬ್ರಿಜೇಶ್ ಚೌಟ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯಂ, ಚಾಂಪಿಯನ್‌ಷಿಪ್‌ ಸಂಯೋಜಕರಾದ ಎಚ್.ವಸಂತ ಬೆರ್ನಾಡ್, ಧನಂಜಯ ಶೆಟ್ಟಿ, ಗೌತಮ್ ಹೆಗ್ಡೆ, ಎಪಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟ್ರಿಸ್ಟನ್ ಬಾಕ್ಸ್‌ಫಾರ್ಡ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT