ಅಳಿಕೆ: ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ

7
ಪಿಯುಕಾಲೇಜುಗಳ ಫುಟ್‌ಬಾಲ್ ಪಂದ್ಯ

ಅಳಿಕೆ: ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ

Published:
Updated:
Deccan Herald

ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಅಳಿಕೆಯಲ್ಲಿ ಸೋಮವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯನ್ನು ವೈದ್ಯ ಡಾ.ಗೀತಾ ಪ್ರಕಾಶ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಅಧ್ಯಕ್ಷ ಯು. ಗಂಗಾಧರ ಭಟ್ ಅಧ್ಯ,ಕ್ಷತೆ ವಹಿಸಿ ಚೆಸ್ ಸ್ಪರ್ಧೆಯು ವಿದ್ಯಾರ್ಥಿಗಳ ಮಾನಸಿಕ ಕ್ಷಮತೆಯನ್ನು ವೃದ್ಧಿಗೊಳಿಸುತ್ತದೆ ಎಂದರು. ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್, ಪ್ರಾಂಶುಪಾಲ ಪ್ರಕಾಶ್ ವಿ. ದೈವಜ್ಞ, ಚೆಸ್ ಮಾಸ್ಟರ್‌ಗಳಾದ ಪ್ರಸನ್ನ ಮತ್ತು ಡೆರಿಕ್ ಪಿಂಟೊ ಉಪಸ್ಥಿತರಿದ್ದರು.

ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಚಂದ್ರಶೇಖರ ಭಟ್ ಎಸ್‌. ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಅಶೋಕ ಭಟ್ ವಂದಿಸಿದರು ಹಾಗೂ ಕ್ರೀಡಾ ತರಬೇತುದಾರ ಶ್ರೀನಿವಾಸ ಕಾರ್ಯಕ್ರಮ ನಿರ್ವಹಿಸಿದರು.

ಫಲಿತಾಂಶ : ಬಾಲಕರು :   ಶ್ರೀರಾಮ್, ವಿವೇಕಾನಂದ ಪಿಯು ಕಾಲೇಜು ಪುತ್ತೂರು ಪ್ರಥಮ; ಅನೂಪ್ ಎಂ.ಜಿ., ಆಳ್ವಾಸ್ ಪಿಯು ಕಾಲೇಜು ಮೂಡುಬಿದಿರೆ ದ್ವಿತೀಯ; ರಿಫಾಜ್ ಎಸ್.ಡಿ.ಎಂ. ಪಿಯು ಕಾಲೇಜು, ಉಜಿರೆ ತೃತೀಯ;
ದರ್ಶನ್ ಬಿ.ಯಂ. ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ ಚತುರ್ಥ; ಅಜಯ್ ಕೃಷ್ಣ ಡಿ, ಕೆನರಾ ಪಿಯು ಕಾಲೇಜು, ಐದನೇ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರು :  ಶಾಲ್ಮಿಕ ಕೆ. ಜೈನ್, ಅಂಬಿಕಾ ಪಿಯು ಕಾಲೇಜು, ಪ್ರಥಮ;  ಶ್ರೀದೇವಿ ಕೋಟೆ, ಅಂಬಿಕಾ ಪಿಯು ಕಾಲೇಜು, ದ್ವಿತೀಯ; ಸ್ವಾತಿ ಭಟ್ ಕೆ.ಎಂ., ಕೆನರಾ ಪಿಯು ಕಾಲೇಜು, ತೃತೀಯ; ಪಂಚಮಿ, ಸರ್ಪಂಗಳ ವಿವೇಕಾನಂದ ಪಿಯು ಕಾಲೇಜು, ಚತುರ್ಥ; ಪ್ರಶೀಕ್ಷ, ಎಸ್.ವಿ.ಎಸ್. ಪಿಯು ಕಾಲೇಜು ಐದನೇ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದ ಚೆಸ್ ತಂಡ ಪ್ರಶಸ್ತಿಯನ್ನು ಆಳ್ವಾಸ್ ಪಿಯು ಕಾಲೇಜು ಪಡೆದಿದೆ. ಬಾಲಕಿಯರ ವಿಭಾಗದ ತಂಡ ಪ್ರಶಸ್ತಿಯನ್ನು ಸೇಂಟ್‌ ಅಲೋಶಿಯಸ್ ಮಂಗಳೂರು ಪಡೆದಿದಿದೆ.

ಫುಟ್‌ಬಾಲ್ ಪಂದ್ಯಾಟ

ವಿಟ್ಲ: ಶಿಕ್ಷಣ ಇಲಾಖಾ ವತಿಯಿಂದ ಅಳಿಕೆಯಲ್ಲಿ ನಡೆದ ಬಂಟ್ವಾಳ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕರ ಫುಟ್‌ಬಾಲ್ ಪಂದ್ಯಾಟದಲ್ಲಿ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಕಾರ್ಮೆಲ್ ಕಾಲೇಜು, ಮೊಡಂಕಾಪು ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿ ಶ್ರೀ ಸತ್ಯಸಾಯಿ ಸುಪೀರಿಯರ್ ಆಸ್ಪತ್ರೆಯ ಡಾ. ಪ್ರಜ್ವಲ್ ಡಿ.ಪಿ. ಇವರು ಬಹುಮಾನ ವಿತರಿಸಿದರು.

ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ನ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್. ಶುಭ ಹಾರೈಸಿದರು. ಅಶೋಕ ಭಟ್ರವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು. ಶ್ರೀನಿವಾಸ್ ಹಾಗೂ ಮೊಡಂಕಾಪಿನ ಸುರೇಶ್ ನಂದೊಟ್ಟು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !