ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ: 9 ವಿದ್ಯಾರ್ಥಿಗಳಿಗೆ 625ಕ್ಕೆ 625

SSLC
Last Updated 9 ಆಗಸ್ಟ್ 2021, 13:08 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಒಂಭತ್ತು ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ.

ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಗಣೇಶ್ ಎಚ್. ವೀರಾಪುರ ಜಿಲ್ಲೆಯಲ್ಲಿ ಶೇ 100 ಅಂಕ ಪಡೆದ ಕನ್ನಡ ಮಾಧ್ಯಮದ ಏಕೈಕ ವಿದ್ಯಾರ್ಥಿಯಾಗಿದ್ದಾರೆ.

ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಅನನ್ಯಾ ಎಂ.ಡಿ. ಮತ್ತುವೆನೆಸ್ಸಾ ಶರೀನ್ ಡಿಸೋಜಾ, ಮಂಗಳೂರು ಉರ್ವಾ ಕೆನರಾ ಪ್ರೌಢಶಾಲೆಯ ಕೀರ್ತನಾ ಶೆಣೈ, ಬೆಳ್ತಂಗಡಿ ಸೇಂಟ್‌ ಮೇರಿಸ್ ಪ್ರೌಢಶಾಲೆಯ ಎಂ. ಸಂಯುಕ್ತಾ ಡಿ. ಪ್ರಭು, ಬಂಟ್ವಾಳ ಎಸ್‌.ವಿ.ಎಸ್. ದೇವಸ್ಥಾನ ಪ್ರೌಢಶಾಲೆಯ ಎನ್. ಪ್ರತೀಕ್ ಮಲ್ಯ, ಮಂಗಳೂರು ಜೆಪ್ಪುವಿನ ಜೆರೋಸಾ ಬಾಲಕಿಯರ ಪ್ರೌಢಶಾಲೆಯ ರಿತಿಕಾ, ಪುತ್ತೂರು ತಾಲ್ಲೂಕಿನ ನೆಲ್ಯಾಡಿಯ ಸೇಂಟ್‌ ಜಾರ್ಜ್ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಶ್ರೀಶ ಶರ್ಮಾ ಕೆ. ಹಾಗೂ ಪುತ್ತೂರಿನ ಪಾಂಗಳಾಯಿ ಬೆಥನಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ತಾನಿಷಾ ರೈ 625ಕ್ಕೆ 625 ಅಂಕ ಪಡೆದಿದ್ದಾರೆ.

ಗರಿಷ್ಠ ಅಂಕ ಪಡೆದವರ ಪೈಕಿಯೂ ಜಿಲ್ಲೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 157 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT