ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡುಬಿದಿರೆ: ಇಸ್ರೊ ‘ಯುವಿಕ’ಕ್ಕೆ ಮೌಲ್ಯಾ ಜೈನ್ ಆಯ್ಕೆ

Published 27 ಮೇ 2024, 13:59 IST
Last Updated 27 ಮೇ 2024, 13:59 IST
ಅಕ್ಷರ ಗಾತ್ರ

ಮೂಡುಬಿದಿರೆ: ಶಾಲಾ ಮಕ್ಕಳಿಗಾಗಿ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಯೋಜಿಸಿದ್ದ ರಾಷ್ಟ್ರಮಟ್ಟದ ಯುವವಿಜ್ಞಾನಿ ಕಾರ್ಯಕ್ರಮ ‘ಯುವಿಕ’ಗೆ ಈ ಬಾರಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೌಲ್ಯಾ ವೈ.ಆರ್ ಜೈನ್ ಆಯ್ಕೆಯಾಗಿದ್ದಾರೆ.

ಇಸ್ರೋದ ವಿವಿಧ ಕೇಂದ್ರಗಳಲ್ಲಿ ಎರಡು ವಾರ ನಡೆದ ಯುವಿಕದಲ್ಲಿ ಪಾಲ್ಗೊಳ್ಳಲು 85 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. 3 ವರ್ಷಗಳ ಶೈಕ್ಷಣಿಕ ಸಾಧನೆ, ರಾಜ್ಯ, ರಾಷ್ಟ್ರಮಟ್ಟದ ವೈಜ್ಞಾನಿಕ, ಕ್ರೀಡಾ ಸಾಧನೆ, ಒಲಿಂಪಿಯಾಡ್‌ಗೆ ಸಮಾನವಾದ ಸ್ಪರ್ಧೆಗಳಲ್ಲಿ ಪಡೆದ ರ‍್ಯಾಂಕ್‌ ಜೊತೆ ಇಸ್ರೊ ಆಯೋಜಿಸುವ ಆನ್‌ಲೈನ್ ರಸಪ್ರಸ್ನೆಯಲ್ಲಿ ಗಳಿಸುವ ಫಲಿತಾಂಶಗಳನ್ನು ಆಧರಿಸಿ 250 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ರಾಜ್ಯ ಪಠ್ಯಕ್ರಮ ಭೋಧಿಸುವ ಶಿಕ್ಷಣ ಸಂಸ್ಥೆಯಿಂದ ಆಯ್ಕೆಯಾದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ ಮೌಲ್ಯಾ. ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮತ್ತು ಕಾರ್ಯದರ್ಶಿ ರಶ್ಮಿತಾ ಜೈನ್ ದಂಪತಿ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT