ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳು ಸಾಗಾಟ ವಿರುದ್ಧ ಮೌನ ಪ್ರತಿಭಟನೆ

Last Updated 19 ಜನವರಿ 2023, 4:29 IST
ಅಕ್ಷರ ಗಾತ್ರ

ಸುಳ್ಯ: ತಾಲ್ಲೂಕಿನಲ್ಲಿ ಅಕ್ರಮ ಮರಳು ಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಮರಳು ಗುತ್ತಿಗೆದಾರರ ಸಂಘದ ಒಕ್ಕೂಟದ ಸದಸ್ಯರು ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ನಡೆಸುತ್ತಿರುವ ಮೌನ ಪ್ರತಿಭಟನೆ ಮುಂದುವರಿದಿದೆ.

ಒಕ್ಕೂಟದ ಸದಸ್ಯ ಅನಿಲ್ ಕುಮಾರ್ ಕೆ.ಸಿ. ಏಕಾಂಗಿಯಾಗಿ ಆರಂಭಿಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಹಲವು ಮಂದಿ ಭಾಗವಹಿಸಿದ್ದಾರೆ. ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಸಮಸ್ಯೆಗೆ ಪರಿಹಾರ ಸೂಚಿಸದೇ ಇದ್ದರೆ ಮುಂದಿನ ಹಂತದ ಹೋರಟದ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

ಅಜಿತ್ ಪೇರಾಲು, ಮುರಳಿ ಮಾವಂಜಿ, ಪದ್ಮನಾಭ ಹರ್ಲಡ್ಕ, ಸುನಿಲ್ ಕುಮಾರ್, ರಿಫಾಯಿ ಪೈಚಾರ್, ಗುರುದೀಕ್ಷಿತ್ ನಾವೂರು, ಜಯರಾಮ ಭಟ್ ಅರಂಬೂರು, ಜಯಂತ ಗೌಡ ಅಡ್ಕಾರು, ವಿನಯ ಅರಂತೋಡು ಭಾಗವಹಿಸಿದ್ದಾರೆ.
ಪಯಸ್ವಿನಿ ನದಿಯಲ್ಲಿ ಮರಳು ಬ್ಲಾಕ್‌ಗಳನ್ನು ಗುರುತಿಸಿ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಬೇಕು ಅಥವಾ ಸಾಂಪ್ರದಾಯಿಕ ರೀತಿಯಲ್ಲಿ ಗ್ರಾಮ ಪಂಚಾಯಿತಿಗೆ ವಹಿಸಿ ಕೊಟ್ಟು ಅವರು ಮರಳು ತೆಗೆಯಲು ಪರವಾನಗಿ ನೀಡುವ ವ್ಯವಸ್ಥೆ ಆಗಬೇಕು ಮತ್ತು ಅವ್ಯಾಹತವಾಗಿ ನಡೆಯುವ ಅನಧಿಕೃತ ಮರಳುಗಾರಿಕೆ ನಿಲ್ಲಿಸಬೇಕು ಎಂದು ಅನಿಲ್ ಕುಮಾರ್ ನೇತೃತ್ವದಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT