ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಚಂದ್ರಶೇಖರ ರೈ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ದಾಖಲೆ

Last Updated 21 ಅಕ್ಟೋಬರ್ 2022, 10:20 IST
ಅಕ್ಷರ ಗಾತ್ರ

ಮಂಗಳೂರು: ‘ಕೆ.ಚಂದ್ರಶೇಖರ ರೈ ಸೂರಿಕುಮೇರು ಅವರು ಲೇಡಿಹಿಲ್‌ನಲ್ಲಿರುವ ಪಾಲಿಕೆಯ ಈಜುಕೊಳದಲ್ಲಿ ಉಸಿರು ಕಟ್ಟಿಕೊಂಡು ಒಂದು ನಿಮಿಷ ಎರಡು ಸೆಕೆಂಡ್‌ ಕಾಲ ಮುಮ್ಮುಖವಾಗಿ 29 ತಿರುವುಗಳನ್ನು ಹಾಕಿದ್ದು, ಇದನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಿದೆ’ ಎಂದು ಈಜುಪಟು ನಾಗರಾಜ ಖಾರ್ವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಚಂದ್ರಶೇಖರ ರೈ ಅವರು 2022ರ ಸೆ.15 ರಂದು ಈ ಸಾಧನೆ ಮಾಡಿದ್ದಾರೆ. ಉಸಿರು ಬಿಗಿ ಹಿಡಿದುಕೊಂಡು 36 ಬಾರಿ ಮುಂಭಾಗದಿಂದ ತಿರುವು ಹಾಕಿರುವುದು ಸದ್ಯ ಗಿನ್ನಿಸ್‌ ದಾಖಲೆಯಾಗಿದೆ. ಈ ದಾಖಲೆಯನ್ನು ಮುರಿಯಲು ಅವರು ತಯರಿ ನಡೆಸುತ್ತಿದ್ದಾರೆ’ ಎಂದರು.

ಪಾಲಿಕೆಯ ಈಜುಕೊಳದಲ್ಲಿ ಜೀವರಕ್ಷಕ ಮತ್ತು ತರಬೇತುದಾರರಾಗಿರು ಚಂದ್ರಶೇಖರ ರೈ, ‘ಜನರಿಗೆ ಈಜಿನ ಮಹತ್ವ ತಿಳಿಸಲು ನಾನು ಈ ಸಾಹಸ ಮಾಡಿದ್ದೇನೆ. ಸಮುದ್ರದ ಈಜಿನಲ್ಲಿ ದಾಖಲೆ ನಿರ್ಮಿಸಿರುವ ಗೋಪಾಲ ಖಾರ್ವಿ, ನಾಗರಾಜ ಖಾರ್ವಿ, ಗಂಗಾಧರ ಕಡೆಕಾರ್‌, ರಾಷ್ಟ್ರೀಯ ಈಜುಪಟು ಸೀತಾರಾಮ ಶೆಟ್ಟಿ, ಮಹಮ್ಮದ್ ಅವರ ಪ್ರೇರಣೆಯಿಂದ ಈ ಸಾಧನೆ ಮಾಡಿದ್ದೇನೆ. ನೀರಿನಲ್ಲಿ ಊರ್ಧ್ವ ಧನುರಾಸನ ಮತ್ತು ಅತೀ ಹೆಚ್ಚು ಸಮಯ ನೀರಿನಲ್ಲಿ ಮುಳುಗಿರುವ ಸಾಹಸ ಮಡಬೇಕೆಂಬ ಇಚ್ಛೆ ನನ್ನದು. ಈಗಾಗಲೇ ಹಲವು ರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಪದಕ ಗೆದ್ದಿದ್ದೇನೆ’ ಎಂ‌ದರು.

ಪಾಲಿಕೆಯ ಈಜು ಕೊಳದ ವ್ಯವಸ್ಥಾಪಕ ರಮೇಶ್‌ ಬಿಜೈ ಸೀ– ಸ್ವಿಮ್ಮರ್ಸ್ ತಂಡದ ಬಿ.ಕೆ.ನಾಯ್ಕ, ಮಂಗಳಾ ಸ್ವಿಮ್ಮಿಂಗ್‌ಕ್ಲಬ್‌ನ ಶಿವಾನಂದ ಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT