ಕಾನ್‌ಸ್ಟೇಬಲ್‌ ಸುಲಿಗೆ ಮಾಡಿದ್ದ ಮೂವರ ಬಂಧನ

7

ಕಾನ್‌ಸ್ಟೇಬಲ್‌ ಸುಲಿಗೆ ಮಾಡಿದ್ದ ಮೂವರ ಬಂಧನ

Published:
Updated:

ಮಂಗಳೂರು: ಮೂರು ತಿಂಗಳ ಹಿಂದೆ ನಗರದ ನೆಹರೂ ಮೈದಾನದ ಬಳಿ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್‌ ಶ್ರೀನಿವಾಸ ಎಂಬುವವರನ್ನು ರಾತ್ರಿ ಅಡ್ಡಗಟ್ಟಿ ಮೊಬೈಲ್ ಮತ್ತು ನಗದು ಸುಲಿಗೆ ಮಾಡಿದ್ದ ಮೂವರನ್ನು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ನಗರದ ಯತೀಶ್ ಎಂ.ಎಸ್‌. ಅಲಿಯಾಸ್ ಯತೀ, ಅಶ್ರಫ್‌ ಅಲಿಯಾಸ್‌ ಮಹಮ್ಮದ್ ಅಶ್ರಫ್‌ ಅಲಿಯಾಸ್‌ ನಿಜಾಮ್‌ ಹಾಗೂ ಮಹಮ್ಮದ್ ಅಶ್ರಫ್‌ ಅಲಿಯಾಸ್‌ ಅಜ್ಜು ಬಂಧಿತರು. ಯತೀಶ್ ತನ್ನ ಸಹಚರನಾದ ರವಿ ಅಲಿಯಾಸ್‌ ಶಂಕರಲಿಂಗೇಗೌಡ ಎಂಬಾತನ ಜೊತೆ ಸೇರಿಕೊಂಡು ಬೆಂಗಳೂರಿನಲ್ಲಿ ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದುದು ತನಿಖೆ ವೇಳೆ ಪತ್ತೆಯಾಗಿದೆ.

ಮಂಗಳೂರು ದಕ್ಷಿಣ ಠಾಣೆಯ ಇನ್‌ಸ್ಪೆಕ್ಟರ್ ಸಾಯಿನಾಥ ಎಂ.ರಾಣೆ, ಸಬ್ ಇನ್‌ಸ್ಪೆಕ್ಟರ್ ರಾಜೇಂದ್ರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !