ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ: ಯು.ಟಿ ಖಾದರ್ ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆಗೆ ಮೊದಲು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ
Last Updated 21 ಏಪ್ರಿಲ್ 2023, 9:06 IST
ಅಕ್ಷರ ಗಾತ್ರ

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಗುರುವಾರ ನಾಮಪತ್ರ ಸಲ್ಲಿಸಿದರು.

ಖಾದರ್ ಅವರು ಮಂಜನಾಡಿ ದರ್ಗಾ, ರಿಫಾಯಿಯಾ ಜುಮಾ ಮಸೀದಿ ಜಾರದಗುಡ್ಡೆ ಬೋಳಿಯಾರ್, ಕೊರಗಜ್ಜನ ಕಟ್ಟೆ ತೊಕ್ಕೊಟ್ಟು ಜಂಕ್ಷನ್, ಸೋಮೇಶ್ವರ ಸೋಮನಾಥ ದೇವಸ್ಥಾನ, ಮಲಯಾಳ ಚಾಮುಂಡಿ ದೈವಸ್ಥಾನ ಕೊಲ್ಯ, ರಕ್ತೇಶ್ವರಿ ದೇವಸ್ಥಾನ ಸೋಮೇಶ್ವರ, ನಾರಾಯಣ ಗುರು ಮಂದಿರ ಕೊಲ್ಯ, ರಾಮ ಮಂದಿರ ಕೊಲ್ಯ, ನಾಗಬ್ರಹ್ಮ ದೇವಸ್ಥಾನ ಕೊಲ್ಯ, ಓವರ್ ಬ್ರಿಡ್ ಕೊರಗಜ್ಜನ ಕಟ್ಟೆ, ಸೇಂಟ್ ಸೆಬಾಸ್ಟಿಯನ್ ಚರ್ಚ್ ಪೆರ್ಮನ್ನೂರು ತೊಕ್ಕೊಟ್ಟು, ವೈದ್ಯನಾಥ ದೈವಸ್ಥಾನ ಉಳ್ಳಾಲಬೈಲು, ಉಳ್ಳಾಲ ಚೀರುಂಬಾ ಭಗವತಿ ಕ್ಷೇತ್ರ, ಸೈಯ್ಯದ್ ಮದನಿ ದರ್ಗಾ ಉಳ್ಳಾಲ ಭೇಟಿ ಮಾಡಿದರು.

ಬಳಿಕ ಉಳ್ಳಾಲಬೈಲು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ, ಕಾರ್ಯಕರ್ತರೊಂದಿಗೆ ಉಳ್ಳಾಲ ಅಬ್ಬಕ್ಕ ಸರ್ಕಲ್‍ವರೆಗೆ ಮೆರವಣಿಗೆಯಲ್ಲಿ ತೆರಳಿ ಬಳಿಕ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನ ಉಳ್ಳಾಲಬೈಲು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯು.ಟಿ. ಖಾದರ್‌, ‘ಉಳ್ಳಾಲದ ಜನಪ್ರತಿನಿಧಿಯಾಗಿ ಕ್ಷೇತ್ರದ ಮಾಡಿರುವ ಅಭಿವೃದ್ಧಿಯಿಂದ ತಲೆ ಎತ್ತಿಕೊಂಡು ಹೋಗುವಂತಹ ಪರಿಸ್ಥಿತಿ ಯನ್ನು ನಿರ್ಮಿಸಿದ್ದೇನೆ. ಉಳ್ಳಾಲದಲ್ಲಿ ಕಡಲ್ಕೊರೆತ ಸಮಸ್ಯೆಗಳನ್ನು ಬಗೆಹರಿಸಿರುವುದರಿಂದ ಓಖಿ ಚಂಡ ಮಾರುತಕ್ಕೂ ಉಳ್ಳಾಲದ ಯಾವುದೇ ಮನೆಗೂ ಹಾನಿಯಾಗಿಲ್ಲ’ ಎಂದರು.

‘ಬಿಜೆಪಿ ಸರ್ಕಾರದಲ್ಲಿ ಅನುದಾನದ ಕೊರತೆ ಮಾಡಿರುವುದರಿಂದ ಶಾಶ್ವತ ನೀರಿನ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ. ಮುಂದೆ ಕಾಂಗ್ರೆಸ್ ಸರ್ಕಾರ ಬಂದಲ್ಲಿ ಆರು ತಿಂಗಳಲ್ಲೇ ಇಡೀ ತಾಲ್ಲೂಕಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಯಾಗಲಿದೆ. ಇನ್ನಷ್ಟು ಯೋಜನೆಗಳಾದ ಕೋಟೆ ಪುರ ಬೋಳಾರದವರೆಗೆ ನೂತನ ಸೇತುವೆ, ಮಂಗಳೂರಿನ ಮೀನು ಗಾರಿಕಾ ಬಂದರು ಉಳ್ಳಾಲಕ್ಕೆ ಸ್ಥಳಾಂತರಗೊಳಿಸುವ ಮೂಲಕ ಇಡೀ ಕ್ಷೇತ್ರದ ಚಿತ್ರಣವನ್ನು ಬದಲಾಯಿಸುವ ಚಿಂತನೆಯಿದೆ’ ಎಂದರು.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ವಕ್ಫ್‌ ಮಾಜಿ ಸದಸ್ಯ ಕಣಚೂರು ಮೋನು, ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ ಉಳ್ಳಾಲ, ಹರ್ಷರಾಜ್ ಮುದ್ಯ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಂಪಲ, ಸುರೇಶ್ ಭಟ್‌ನಗರ, ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ, ಕಾಂಗ್ರೆಸ್ ಚುನಾವಣಾ ವೀಕ್ಷಕ ದೇವದಾಸ್ ಭಂಡಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹಮ್ಮದ್ ಮೋನು, ಚಂದ್ರಹಾಸ್ ಕರ್ಕೇರ, ಕೆಪಿಸಿಸಿ ವಕ್ತಾರ ಅಭಿಷೇಕ್‍ ಉಳ್ಳಾಲ್, ಫಾರೂಕ್ ಉಳ್ಳಾಲ್, ವಿವಿಧ ಘಟಕಗಳ ಅಧ್ಯಕ್ಷರಾದ ಚಂದ್ರಿಕಾ ರೈ, ವೃಂದಾ ಪೂಜಾರಿ ದೀಪಕ್ ಪಿಲಾರ್, ಪುರುಷೋತ್ತಮ ಪಿಲಾರು, ಆಲ್ವಿನ್ ಡಿ.ಸೋಜಾ, ಅಶ್ರಫ್ ಕಿನ್ಯಾ, ಮುಸ್ತಾಫ ಅಬ್ದುಲ್ಲಾ, ದಿನೇಶ್ ರೈ ಉಳ್ಳಾಲ, ನಾಸಿರ್ ನಡುಪವು, ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಉಪಾಧ್ಯಕ್ಷ ಆಯೂಬ್ ಮಂಚಿಲ, ಕಾರ್ಯದರ್ಶಿ ಮನ್ಸೂರು, ಮೋಹನ್ ಸಾಲಿಯಾನ್, ಟಿ.ಎಸ್. ಅಬ್ದುಲ್ಲಾ, ಸಲೀಂ ಉಳ್ಳಾಲ್, ನಾಸಿರ್ ಸಾಮಾಣಿಗೆ ಇದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT