ಮೂಡುಬಿದಿರೆ: ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ಈ ಯುವಶಕ್ತಿ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಕೇಂದ್ರ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಹೇಳಿದರು.

ಕಲ್ಲಬೆಟ್ಟು ನ್ಯೂ ವೈಬ್ರೆಂಟ್ ಪಿಯು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ವೈಬ್ರೆಂಟ್ ಡೇ 2025’ ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ರಾಷ್ಟ್ರ ನಿರ್ಮಿಸುವ ಇಂದಿನ ಯುವಜನಾಂಗ ಕಲಿಕೆಯ ಹಂತದಲ್ಲೇ ಇಚ್ಛಾಶಕ್ತಿ, ಧೈರ್ಯ, ಪರಿಶ್ರಮ ಪಡಬೇಕು. ಯುವಶಕ್ತಿ ದೇಶದ ಸಂಪತ್ತಾಗಿ ಪರಿವರ್ತನೆಯಾದಾಗ ಸಂಪದ್ಭರಿತ ದೇಶ ನಿರ್ಮಾಣ ಸಾಧ್ಯ. ಹಣದ ಬೆನ್ನು ಹತ್ತದೆ ಸಂತೃಪ್ತ ಜೀವನಕ್ಕೆ ಒತ್ತು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಂಗ್ರೆಸ್ ಮುಖಂಡ ಕೆ.ಅಭಯಚಂದ್ರ ಜೈನ್, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಅಮರೇಶ್ ಅತಿಥಿಗಳಾಗಿ ಭಾಗವಹಿಸಿದ್ದರು.

ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಎನ್ಐಟಿಕೆಯ ಪ್ರಾಧ್ಯಾಪಕ ಎಂ.ಎನ್.ಸತ್ಯನಾರಾಯಣ ಅವರಿಗೆ ವೈಬ್ರೆಂಟ್ ವಿಜ್ಞಾನ ರತ್ನ
ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಸ್ಥೆಯ ಟ್ರಸ್ಟಿ ಷೇಕ್ ಮಹಬೂಬ್ ಭಾಷಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಎಸ್.ಎಸ್.ವೆಂಕಟೇಶ ನಾಯಕ್ ಶೈಕ್ಷಣಿಕ ಸಾಧನೆಗಳ ಕುರಿತು ಮಾಹಿತಿ ನೀಡಿದರು.

ಟ್ರಸ್ಟಿಗಳಾದ ಚಂದ್ರರಾಜೇ ಅರಸ್, ಯೋಗೀಶ್ ಬೆಡೇಕರ್, ಸುಭಾಷ್ ಕೆ.ಝಾ, ಶರತ್ ಗೋರೆ ಭಾಗವಹಿಸಿದ್ದರು. ಆಡಳಿತಾಧಿಕಾರಿ ಅರುಣ್ ಡಿಸಿಲ್ವ ಸ್ವಾಗತಿಸಿದರು. ಉಪಪ್ರಾಂಶುಪಾಲೆ ರಶ್ಮಿ ಅರಸ್ ವಂದಿಸಿದರು. ಉಪನ್ಯಾಸಕ ನಿಕೇತ್ ಮೋಹನದಾಸ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.