ಶನಿವಾರ, ಜೂನ್ 19, 2021
21 °C

ವಾರಾಂತ್ಯದ ಕರ್ಫೂ: ಮಂಗಳೂರು ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್‌ ಕರ್ಫ್ಯೂ ಶುಕ್ರವಾರ ರಾತ್ರಿಯಿಂದಲೇ ಆರಂಭವಾಗಿದೆ. ಶನಿವಾರ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಾಲು, ತರಕಾರಿ ಮುಂತಾದ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಬಳಿಕ ಎಲ್ಲವೂ ಬಂದ್‌ ಆಗಿವೆ.

ಬೆಳಿಗ್ಗೆ ನಗರದ ಸೆಂಟ್ರಲ್‌‌ ಮಾರುಕಟ್ಟೆ ಸೇರಿದಂತೆ ಸೂಪರ್‌‌ ಮಾರುಕಟ್ಟೆಗಳು ತೆರೆದಿದ್ದು, ಬೆರಳೆಣಿಕೆಯ ಜನ ಇದ್ದರು. ಇನ್ನು ನಗರದ ಸ್ಟೇಟ್‌‌‌ ಬ್ಯಾಂಕ್‌‌‌ ಬಳಿಯ ಮೀನು ಮಾರುಕಟ್ಟೆ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿತ್ತು.
ವೀಕೆಂಡ್‌ ಕರ್ಫ್ಯೂ ಸಂದರ್ಭ ಅನಗತ್ಯವಾದ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಹಣ್ಣು, ತರಕಾರಿ ಖರೀದಿ, ಪತ್ರಿಕೆ ಮಾರಾಟ ಹಾಗೂ ಪತ್ರಿಕೆ ಮಾರಾಟ ಹಾಗೂ ಹೊಟೇಲ್‌‌‌ ಪಾರ್ಸೆಲ್‌ ಸೇವೆಗೆ ಅವಕಾಶವಿದೆ.

10 ಗಂಟೆಯ ಬಳಿಕ ಜಿಲ್ಲೆಯಾದ್ಯಂತ ಅಗತ್ಯ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲಾ ಬಂದ್‌ ಆಗಿವೆ.
ನಗರದ ಹಲವೆಡೆ ಚೆಕ್ ಪೋಸ್ಟ್ ಮಾಡಲಾಗಿದ್ದು, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು