ಅಪಘಾತ: ಯಕ್ಷಗಾನ ಕಲಾವಿದ ಸಾವು

ಕಾಸರಗೋಡು: ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ ಕಾಸರಗೋಡು ಮುಳಿಯಾರು ಬಳ್ಳ ಮೂಲೆ ಈಶ್ವರ ಭಟ್ (57)ವಾಹನ ಅಪಘಾತದಲ್ಲಿ ಮೃತರಾದರು. ಕಾಸರಗೋಡು ಕಡೆಯಿಂದ ಬಳ್ಳ ಮೂಲೆಯ ತಮ್ಮ ಮನೆಗೆ ಹೋಗುವ ವೇಳೆ , ಕೋಟೂರು ಚಡವಿನಲ್ಲಿ ಎದುರುಗಡೆಯಿಂದ ಸಿಮೆಂಟ್ ಹೇರಿ ಬಂದ ಲಾರಿ ಡಿಕ್ಕಿಯಾ ಗಿ ಸ್ಥಳದಲ್ಲೇ ಮೃತರಾದರು.
ಖ್ಯಾತ ಚೆಂಡೆ,ಮದ್ದಳೆ ಕಲಾವಿದರಾಗಿದ್ದರು. ಮುಳಿಯಾ ರುಜು ಯಕ್ಷ ತೂಣೀರ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಕಾರ್ತಿಕೇಯ ಕಲಾ ನಿಲಯದಲ್ಲಿ ಯಕ್ಷಗಾನ ಚೆಂಡೆ ವಾದಕರಾಗಿದ್ದರು. ಮೆಡಿಕಲ್ ರಿಪ್ರಜೆಂಟಿವ್ ಆಗಿಯೂ, ವಿಮಾ ಏಜೆಂಟ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು.ಅವರ ತಾಯಿ ಒಂದು ವಾರದ ಹಿಂದೆಯಷ್ಟೇ ನಿಧನ ರಾಗಿದ್ದರು. ಅವರಿಗೆ ಪತ್ನಿ ಇದ್ದಾರೆ.
ಪ್ರತಿಕ್ರಿಯಿಸಿ (+)