ಮಂಗಳೂರು: ರಾಷ್ಟ್ರಿಯ ಹೆದ್ದಾರಿ–75ರಲ್ಲಿ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಬಳಿ ಸ್ಕೂಟರ್‌ಮತ್ತು ಬೈಕ್ ಡಿಕ್ಕಿಯಾಗಿ ಯುವಕನೊಬ್ಬ ಬುಧವಾರ ಮೃತಪಟ್ಟಿದ್ದಾನೆ.
ಬೈಕ್ ಸವಾರ ಮೊಹಮ್ಮದ್ ನಶತ್ (21 ವರ್ಷ) ಮೃತ ಯುವಕ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜ್ಞೇಶ್ ಶೆಟ್ಟಿ ಅವರು ಪರಿಚಯದ ಸವಿನ್ ಪೂಜಾರಿ ಜೊತೆ ಆಕ್ಟಿವ ಹೋಂಡಾ ಸ್ಕೂಟರ್‌ನಲ್ಲಿ ಬಂಟ್ವಾಳದ ಕಡೆಗೆ ಹೋಗುತ್ತಿದ್ದರು.
ಅಡ್ಯಾರಿನ ಸಹ್ಯಾದ್ರಿ ಕಾಲೇಜು ಬಳಿಯ ಎಟಿಎಂಗೆ ತೆರಳಲು ಅವರು ವಾಹನವನ್ನು ಇನ್ನೊಂದು ಬದಿಯ ರಸ್ತೆಗೆ ತಿರುಗಿಸಿದ್ದರು. ಆಗ ಬಿ.ಸಿ.ರೋಡ್ ಕಡೆಯಿಂದ ಬಂದ ಬೈಕ್, ಈ ಸ್ಕೂಟರ್‌ಗೆ ಗುದ್ದಿ, ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು.
ಬೈಕ್ ಸವಾರ ಮೊಹಮ್ಮದ್ ನಶತ್ ಅವರ ತಲೆಯು ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದಿತ್ತು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳದಲ್ಲಿದ್ದ ವ್ಯಕ್ತಿಗಳು ಉಪಚರಿಸಿ ವಾಹನವೊಂದರಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಗಾಯಾಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಸ್ಕೂಟರ್ ಸವಾರರಾದ ಪ್ರಜ್ಞೇಶ್ ಶೆಟ್ಟಿ ಹಾಗೂ ಸವಿನ್ ಅವರೂ ಅಪಘಾತದಿಂದ ಗಾಯಗೊಂಡಿದ್ದು, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.