ಮಂಗಳೂರು: ನಗರದ ಕದ್ರಿ ಕೆಪಿಟಿ ಸಮೀಪದ 'ಪ್ಲಾನೆಟ್ ಎಸ್‌ಕೆಎಸ್ ಅಪಾರ್ಟ್‌ಮೆಂಟ್ ಸಮುಚ್ಚಯ'ದ 14ನೇ ಮಹಡಿಯಿಂದ ಬಿದ್ದು ಯುವಕ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ.
'ಈ ಅಪಾರ್ಟ್‌ಮೆಂಟ್ ಸಮುಚ್ಚಯದ 14ನೇ ಮಹಡಿಯಲ್ಲಿ ವಾಸವಿರುವ ಅಬ್ದುಲ್ ಸಲೀಂ ಅವರ ಮಗ ಮಹಮದ್ ಶಾಮಲ್ (21 ವರ್ಷ) ಮೃತ ಯುವಕ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮುಂಜಾನೆ 4.45ರ ಸುಮಾರಿಗೆ ಮಹಮ್ಮದ್ ಶಾಮಲ್ ಕಟ್ಟಡದಿಂದ ಕೆಳಗೆ ಬಿದ್ದಿದ್ದರು. ಇದು ಆಕಸ್ಮಿಕ ಘಟನೆಯೋ, ಆತ್ಮಹತ್ಯೆಯೋ ತಿಳಿದುಬಂದಿಲ್ಲ. ಮೃತ ಯುವಕನ ಮಾವ ಉಮರ್ ಫಾರೂಕ್ ಅವರು ದೂರು ನೀಡಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.