ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತುಬೇಧವಿಲ್ಲದೆ ಹೆಚ್ಚುತ್ತಿದೆ ಕಡಲ್ಕೊರೆತ!

ಮರವಂತೆ: ಆಮೆಗತಿಯಲ್ಲಿ ಮೀನುಗಾರಿಕಾ ಹೊರಬಂದರು ಕಾಮಗಾರಿ
Last Updated 21 ಫೆಬ್ರುವರಿ 2017, 5:56 IST
ಅಕ್ಷರ ಗಾತ್ರ
ಮರವಂತೆ (ಬೈಂದೂರು): ಮರವಂತೆ ಯಲ್ಲಿ ನಿರ್ಮಾಣವಾಗುತ್ತಿರುವ ಕೇರಳ ಮಾದರಿಯ ಮೀನುಗಾರಿಕಾ ಹೊರ ಬಂದರು ರಾಜ್ಯಕ್ಕೆ ಮೊದಲು ಎಂಬ ಹೆಗ್ಗಳಿಕೆ ಒಂದು ಕಡೆಯಾದರೆ, ಮೂರು ವರ್ಷಗಳ ಹಿಂದೆ ಆರಂಭವಾದ ₹ 54 ಕೋಟಿ ವೆಚ್ಚದ ಈ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರು ವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
 
ಈ  ಯೋಜನೆಯೂ ಇಷ್ಟರಲ್ಲೇ ಪೂರ್ಣಗೊಂಡು ಮೀನುಗಾರರಿಗೆ ವರ ವಾಗಬೇಕಿತ್ತು. ಆದರೆ, ಯೋಜನೆ ಪೂರ್ಣಗೊಳಿಸಲು ವಿಧಿಸಿದ್ದ ಗಡುವು  ಮೀರಿ ಹೋಗಿದ್ದರೂ, ಕಾಮಗಾರಿ ನಡೆದಿರುವುದು ಶೇ 60ರಷ್ಟು ಮಾತ್ರ. ಅದರೆ, ಬಂದರು ಪ್ರದೇಶದಲ್ಲಿ ಕಾಲ ಬೇಧವಿಲ್ಲದೆ ತೀವ್ರ ಸ್ವರೂಪದ ಕಡ ಲ್ಕೊರೆತ ಉಂಟುಮಾಡುತ್ತಿದ್ದು, ನಿವಾ ಸಿಗಳು ಬಂದರನ್ನು ಒಂದು ಶಾಪ ಎಂದು ದೂರುತ್ತಿದ್ದಾರೆ. 
 
ಈ ಬಂದರು ಮೂರು ದಿಕ್ಕುಗಳಲ್ಲಿ ನಿರ್ಮಾಣವಾಗುವ ಅಲೆ ತಡೆಗೋಡೆ ಗಳು ಸೃಷ್ಟಿಸುವ ಅಲೆರಹಿತ ಆವರಣ ದಿಂದ ಕೂಡಿರುತ್ತದೆ. ವಾಯವ್ಯ ಮೂ ಲೆಯಲ್ಲಿರುವ ಪ್ರವೇಶ ದ್ವಾರದ ಮೂಲಕ ಮೀನುಗಾರಿಕಾ ದೋಣಿಗಳ ಆಗಮನ, ನಿರ್ಗಮನಕ್ಕೆ ಅವಕಾಶವಿರುತ್ತದೆ. ಮೀ ನುಗಾರಿಕೆ ನಡೆಸಿ ಬಂದ ಸಾಂಪ್ರದಾಯಿಕ ಅಥವಾ ನಾಡದೋಣಿಗಳು ದಡಸೇರಿ ತಂದ ಮೀನನ್ನು ವಾಹನ ಮೂಲಕ ಸಾಗಿಸ ಬಹುದಾಗಿದೆ. 
 
ಈ ಕಾಮಗಾರಿಯ ಗುತ್ತಿಗೆ ಪಡೆ ದಿದ್ದು ಎನ್‌ಎಸ್‌ಕೆ ಬಿಲ್ಡರ್ಸ್‌ ಎಂಬ ತಮಿಳುನಾಡು ಮೂಲದ ಸಂಸ್ಥೆ. ಈ ವರೆಗೆ ಅದು ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲಿ ಶಿಲೆಗಲ್ಲುಗಳ ತಡೆಗೋಡೆ ನಿರ್ಮಿಸಿ ಅವುಗಳ ಹೊರಭಾಗಕ್ಕೆ ಟೆಟ್ರಾ ಪಾಡ್‌ಗಳನ್ನು ಅಳವಡಿಸುವ ಕಾರ್ಯ ಪೂರೈಸಿದೆ. ಪಶ್ಚಿಮದ ತಡೆಗೋಡೆ ಕಾಮಗಾರಿಯನ್ನು ಈಗ ಕೈಗೆತ್ತಿ ಕೊಂಡಿದೆ. ಇದು ಹೆಚ್ಚು ಆಳದ ಸಮು ದ್ರದಲ್ಲಿ ಹೆಚ್ಚು ಉದ್ದಕ್ಕೆ ನಡೆಸಬೇಕಾದ ಕೆಲಸ. ಸಂಸ್ಥೆಯ ಬಳಿ ಈ ವಿಶಿಷ್ಟ ಮತ್ತು ದೊಡ್ಡ ಕಾಮಗಾರಿಯನ್ನು ನಿರ್ವಹಿಸಲು ಅಗತ್ಯವೆನಿಸುವಷ್ಟು ವಾಹನ ಮತ್ತು ಯಂತ್ರಗಳು ಇಲ್ಲ. ಕಾಮಗಾರಿ ನಿಧಾನ ವಾಗಲು ಇದು ಕಾರಣ ಎನ್ನಲಾಗುತ್ತಿದೆ. 
 
ಇಕ್ಕಡೆಗಳ ತಡೆಗೋಡೆ ನಿರ್ಮಾಣ ವಾಗಿ ಪಶ್ಚಿಮದ ತಡೆಗೋಡೆ ಮುಗಿ ಯದ ಕಾರಣ ನೈಋತ್ಯ ಮತ್ತು ವಾಯುವ್ಯ ದಿಕ್ಕಿನಿಂದ ಗಾಳಿ ಬೀಸಿದಾಗ ಶಕ್ತಿಯುತ ಅಲೆಗಳು ದಂಡೆಗೆ ಅಪ್ಪಳಿ ಸುತ್ತವೆ. ಹಿಂದಿನ ಮೂರು ಮಳೆಗಾಲ ದಲ್ಲಿ ದಕ್ಷಿಣ ತಡೆಗೋಡೆಯ ಬಳಿಯ ಕೆ.ಎಂ. ಕೃಷ್ಣ ಖಾರ್ವಿ ಎಂಬವರ ತೆಂಗಿನ ತೋಟದ 15 ಸೆಂಟ್ಸ್ ಸ್ಥಳ ಮತ್ತು ಅದರಲ್ಲಿದ್ದ 26 ತೆಂಗಿನ ಮರಗಳು ಸಮುದ್ರ ಸೇರಿದ್ದವು. ಈಗ ಎರಡು ಗೋಡೆಗಳ ಮಧ್ಯಭಾಗದಲ್ಲಿ ಕೊರೆತ ನಡೆಯುತ್ತಿದ್ದು ಅಲ್ಲಿನ ಹಲವು ತೆಂಗಿನ ಮರಗಳು,  ಮೀನುಗಾರರ ವಿಶ್ರಾಂತಿ ಕೋಣೆಗಳು ಸಮುದ್ರದ ಪಾಲಾಗಿವೆ. 
 
ಯೋಜನಾ ಪ್ರದೇಶವಾದುದರಿಂದ ಪರಿಹಾರ ಕೊಡುವಂತಿಲ್ಲ ಎಂದು ಅಧಿಕಾರಿಗಳು ಕೈತಿರುಗಿಸುತ್ತಿದ್ದಾರೆ. ಕನಿಷ್ಠ ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಮಳೆಗಾಲಕ್ಕೆ ಮುನ್ನ ಕಾಮಗಾರಿ ಪೂರ್ತಿಗೊಳಿಸಲಿ ಎನ್ನುವುದು ಮರವಂತೆಯ ಮೀನುಗಾರರ ಅಳಲು.
 
**
ಮಳೆಗಾಲಕ್ಕಿಂತ ಮೊದಲು ಕಾಮಗಾರಿ ಮುಗಿಯದಿದ್ದರೆ ಬಂದರು ಪ್ರದೇಶದಲ್ಲಿ ತೀವ್ರ ಸ್ವರೂಪ ಪಡೆಯುವ ಕಡಲ್ಕೊರೆತ  ಮೀನುಗಾ ರಿಕಾ ರಸ್ತೆಯನ್ನು ಆಹುತಿ ಪಡೆಯಲಿದೆ.
-ಪಟಗಾರ್ ನಾಗರಾಜ ಖಾರ್ವಿ
ಮೀನುಗಾರ ಮುಖಂಡ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT