ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪ್ಕೊ: ಮೇ17ರಿಂದ ಖರೀದಿ ಪುನರಾರಂಭ

Last Updated 14 ಮೇ 2021, 12:22 IST
ಅಕ್ಷರ ಗಾತ್ರ

ಮಂಗಳೂರು: ಕ್ಯಾಂಪ್ಕೊ ಮೇ 17ರಿಂದ ಕೃಷಿ ಉತ್ಪನ್ನಗಳ ಖರೀದಿಯನ್ನು ಪುನರಾರಂಭಿಸಲು ನಿರ್ಧರಿಸಿದೆ.

ಕೋವಿಡ್‌ ಪ್ರಕರಣಗಳ ಹೆಚ್ಚಳ ನಿಯಂತ್ರಣಕ್ಕೆ ಸರ್ಕಾರದ ನಿರ್ಬಂಧ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾಶಾಖೆಗಳಲ್ಲಿ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಇದೀಗ ಖರೀದಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲಿರುವ ಕ್ಯಾಂಪ್ಕೊ, ಕೇರಳ ಮತ್ತು ಕರ್ನಾಟಕದ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಅಡಿಕೆ ಮತ್ತು ಕೊಕ್ಕೊ ಬೀಜಗಳನ್ನು ಖರೀದಿಸಲಿದೆ. ಪ್ರತಿದಿನ ಗರಿಷ್ಠ 25 ಸದಸ್ಯರಿಂದ (ಉಪಶಾಖೆಗಳಲ್ಲಿ ವಾರದಲ್ಲಿ ಒಂದು ದಿನ ಗರಿಷ್ಠ 15 ಸದಸ್ಯರಿಂದ) ಸರದಿಯ ಪ್ರಕಾರ ತಲಾ ಗರಿಷ್ಠ ಒಂದು ಕ್ವಿಂಟಲ್ ಅಡಿಕೆಯನ್ನು ಖರೀದಿಸಲಿದ್ದು, ಕೊಕ್ಕೊ ಖರೀದಿಗೆ ಯಾವುದೇ ನಿರ್ಬಂಧ ಇಲ್ಲ.ಆದರೆ ಕಾಳುಮೆಣಸಿನ ಖರೀದಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧ್ಯಕ್ಷ ಎ.ಕಿಶೋರ್‌ ಕುಮಾರ್‌ ಕೊಡ್ಗಿ , ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT