ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

ಸಂಸದ ನಳಿನ್‌ ‘ಬೆಂಕಿ ಹಚ್ಚುವ’ ಹೇಳಿಕೆಗೆ ವಿರೋಧ
Last Updated 3 ಜನವರಿ 2017, 6:10 IST
ಅಕ್ಷರ ಗಾತ್ರ

ಮಂಗಳೂರು: ಕೊಣಾಜೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕಾರ್ತಿಕ್‌ ರಾಜ್‌ ಕೊಲೆ ಆರೋಪಿಗಳನ್ನು ಬಂಧಿ ಸದಿದ್ದರೆ ಜಿಲ್ಲೆಗೆ ಬೆಂಕಿ ಬೀಳಲಿದೆ ಎಂಬ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರ ಹೇಳಿಕೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರಚೋದನಕಾರಿ ಹೇಳಿಕೆ ಮೂಲಕ ಸಂಸದರು ಜಿಲ್ಲೆಯಲ್ಲಿ ಕೋಮುದ್ವೇಷ ಬಿತ್ತಲು ಯತ್ನಿಸುತ್ತಿದ್ದಾರೆ ಎಂದು ಆರೋ ಪಿಸಿದ ಪ್ರತಿಭಟನಾಕಾರರು, ‘ಅವರು ಬೆಂಕಿ ಹಚ್ಚಲಿ, ನಾವು ಅದನ್ನು ಆರಿಸು ತ್ತೇವೆ’ ಎಂದು ಘೋಷಣೆ ಕೂಗಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಿಥುನ್‌ ರೈ, ‘ನಳಿನ್‌ ಕುಮಾರ್‌ ಅವರು ರಾಜಕೀಯ ಲಾಭ ಕ್ಕಾಗಿ ಜಿಲ್ಲೆಗೆ ಬೆಂಕಿ ಹಚ್ಚಲು ಹೊರಟಿ ದ್ದಾರೆ. ಕಾರ್ತಿಕ್‌ ರಾಜ್‌ ಒಬ್ಬ ಒಳ್ಳೆಯ ಹುಡುಗ. ಆತನ ಕೊಲೆಗೆ ಕಾರಣರಾದ ವರನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸ ಬೇಕು ಎಂಬುದು ಜಿಲ್ಲೆಯ ಎಲ್ಲಾ ಜನರ ಬೇಡಿಕೆ. ಆದರೆ, ಈ ವಿಚಾರವನ್ನು ಮುಂ ದಿಟ್ಟುಕೊಂಡು ವಿಭಿನ್ನ ಧರ್ಮೀಯರ ನಡುವೆ ದ್ವೇಷ ಬಿತ್ತುವ ಪ್ರಯತ್ನವನ್ನು ಸಂಸದರೇ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ನಮ್ಮ ಪಕ್ಷದ ಸದಸ್ಯರಾಗಿರುವ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಸೀತಾರಾಮ ಪೂಜಾರಿ ಅವರೂ ಭಾನು ವಾರದ ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರು. ಸಂಸದರು ಪ್ರಚೋದನಕಾರಿ ಹೇಳಿಕೆ ನಡೆದ ಬಳಿಕ ಅವರು ಸಭೆ ಯಿಂದ ಹೊರಬಂದಿದ್ದಾರೆ. ಸಾಕ್ಷ್ಯ ಸಮೇ ತವಾಗಿ ಸಂಸದರ ವಿರುದ್ಧ ಕೊಣಾಜೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ನಳಿನ್‌ಕುಮಾರ್‌ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲು ಮಾಡುವಂತೆ ಒತ್ತಾಯಿಸಿದ್ದೇವೆ’ ಎಂದರು.

‘ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಅವರ ಕೊಲೆ ನಡೆ ದಾಗ ಸಂಸದರು ಏಕೆ ಧ್ವನಿ ಎತ್ತಲಿಲ್ಲ? ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ವಕೀಲ ಪ್ರೀತಮ್‌ ಅಪಹರಣ ಪ್ರಕರಣದ ಬಗ್ಗೆ ನಳಿನ್‌ ಏಕೆ ಮೌನವಾಗಿದ್ದಾರೆ? ಕೆಲವು ವಿಚಾರಗಳನ್ನು ಆಯ್ದುಕೊಂಡು ಹಿಂಸೆಗೆ ಪ್ರಚೋದನೆ ನೀಡುವ ಕೆಲಸ ವನ್ನು ಅವರು ಮಾಡುತ್ತಿದ್ದಾರೆ. ಜಿಲ್ಲೆಯ ಜನರ ನೆಮ್ಮದಿ ಕೆಡಿಸುವ ಪ್ರಯತ್ನಗಳನ್ನು ಸಂಸದರು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಸದಸ್ಯ ಪ್ರವೀ ಣ್‌ಚಂದ್ರ ಆಳ್ವ ಮಾತನಾಡಿ, ‘ನಗರ ಪೊಲೀಸ್ ಕಮಿಷನರ್‌ ಎಂ.ಚಂದ್ರ ಶೇಖರ್ ಒಬ್ಬ ದಕ್ಷ ಅಧಿಕಾರಿ. ಕಾರ್ತಿಕ್‌ ರಾಜ್‌ ಕೊಲೆ ಪ್ರಕರಣದ ಆರೋಪಿ ಗಳನ್ನು ಶೀಘ್ರದಲ್ಲಿ ಬಂಧಿಸುತ್ತಾರೆ ಎಂಬ ವಿಶ್ವಾಸ ಅವರ ಮೇಲಿದೆ. ಬಿಜೆಪಿ ಮುಖಂಡರು ಇಂತಹ ಪ್ರಕರಣಗಳನ್ನು ಮುಂದಿಟ್ಟುಕೊಂಡು ಶಾಂತಿ ಕದಡುವ ಕೆಲಸ ಮಾಡಬಾರದು’ ಎಂದರು.

ಮಂಗಳೂರು ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಲುಕ್ಮಾನ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT