ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದತೆಗೆ ಆದ್ಯತೆ ಅಗತ್ಯ: ಶಾಸಕ ಖಾದರ್

Last Updated 21 ಫೆಬ್ರುವರಿ 2012, 9:45 IST
ಅಕ್ಷರ ಗಾತ್ರ

ಉಳ್ಳಾಲ: ದೇಶದಲ್ಲಿ ಸೌಹಾರ್ದತೆಗೆ ಒತ್ತು ಕೊಡುವುದರಿಂದ  ಸಮಾಜವನ್ನು ಬಲಿಷ್ಠ ವಾಗಿಸಲು ಸಾಧ್ಯ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಅವರು ಭಾನುವಾರ ದೇರಳಕಟ್ಟೆ ಅಲ್ ಬಯಾನ್  ಸೆಂಟರಿನ ಮೈದಾನದಲ್ಲಿ  ಸೋಶಿ ಯಲ್ ಅಚೀವ್ ಮೆಂಟ್ ಫಾರಂ  ವತಿಯಿಂದ  ಜರಗಿದ ಈದ್ ಮಿಲಾದ್  ಸೌಹಾರ್ದ ಸಮಾರಂಭ ಮತ್ತು  ಮಿಲಾದ್ ಸೌಹಾರ್ದ ಸಮಾರಂಭ ಮತ್ತು ಮಿಲಾದ್ ವಿಶೇಷಾಂಕ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ  ಭಾಗವಹಿಸಿ ಅವರು ಮಾತ ನಾಡಿದರು.

`ನಮ್ಮ ಧರ್ಮವನ್ನು ಆಚರಿಸಿ ಇನ್ನೊಬ್ಬರ ಧರ್ಮವನ್ನು ಗೌರವಿಸುವಂತಹ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣದೊಂದಿಗೆ ಸಮಾಜದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಬೇಕಿದ್ದು ಸಂಘಟನೆಗಳು ಅದಕ್ಕಾಗಿ ಪ್ರಯತ್ನಿಸಬೇಕಿದೆ~ ಎಂದರು.

ಜೆಡಿಎಸ್  ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ  ಮಾತನಾಡಿ, ಘರ್ಷಣೆಗೆ  ಭಾಷಣಗಳು ಪ್ರೇರಣೆಯಾಗಬಾರದು, ಜಾಗೃತ  ಮನಸ್ಸಿನಿಂದ  ಜಾಗೃತ ಸಮಾಜ  ನಿರ್ಮಾಣ ಮತ್ತು ಅಭಿವೃದ್ಧಿಯ  ನಾಡು ನಿರ್ಮಾಣ ಮಾಡಲು ಸಾಧ್ಯ ಎಂದರು.


ಸಂಸ್ಥೆಯ ಗೌರವಾಧ್ಯಕ್ಷ, ಕರ್ನಾಟಕ ಅರೆಬಿಕ್  ವಿದ್ಯಾಭ್ಯಾಸ ಬೋರ್ಡಿನ  ಅಧ್ಯಕ್ಷ ಅಬೂಬಕರ್ ದೇರಳಕಟ್ಟೆ ಅವರು ಅಧ್ಯಕ್ಷತೆ ವಹಿಸಿದ್ದರು. ಅಲ್-ರಹ್ಮಾನಿಯಾ  ಮಸೀದಿಯ ಖತೀಬ  ಮೊಯ್ದಿನ್ ಕುಂಞಿ  ದುಆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ  ಕಾಂಗ್ರೆಸ್ ಮುಖಂಡರಾದ  ಟಿ.ಎಸ್.ಅಬ್ದುಲ್ಲಾ,  ಮೊಯ್ದಿನ್ ಕುಂಞಿ,  ಯೂಸುಫ್ ಬಾವ, ಟಿ.ಯಸ್.ಅಬೂಬಕರ್  ತುಳುನಾಡ ರಕ್ಷಣಾ ವೇದಿಕೆಯ  ಯೋಗೀಶ್ ಶೆಟ್ಟಿ ಜೆಪ್ಪು ಮತ್ತು  ಜ್ಯೋತಿಕಾ ಜೈನ್, ತುಳುನಾಡು ಐಕ್ಯತಾ ವೇದಿಕೆಯ  ಹೈದರ್ ಪರ್ತಿಪ್ಪಾಡಿ,  ಮಾಜಿ ಉಪಮೇಯರ್  ಬಶೀರ್ ಬೈಕಂಪಾಡಿ,  ಮಂಜನಾಡಿ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ದೊಡ್ಡಮನೆ ಮುಖ್ಯ ಅತಿಥಿಯಾಗಿದ್ದರು.

ಮಂಜನಾಡಿ ರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋ ಪಾಧ್ಯಾಯ ಪ್ರದೀಪ್ ಕುಮಾರ್,   ಪಿಎಫ್‌ಐ ಮುಖಂಡ ನೌಷಾದ್,  ಜಿ.ಪಂ. ಮಾಜಿ ಸದಸ್ಯ ಅಬ್ದುಲ್ ಅಜೀಜ್ ಮಲಾರ್, ಸಾಹಿತಿ ಮಹಮ್ಮದ್ ಬಡ್ಡೂರು, ಸಂಘದ ಅಧ್ಯಕ್ಷ ಬಾವಾ ಹಾಜಿ, ಬಶೀರ್ ಕಲ್ಕಟ್ಟ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT