ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟ ಪ್ರಕರಣ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

Last Updated 22 ಮಾರ್ಚ್ 2017, 6:46 IST
ಅಕ್ಷರ ಗಾತ್ರ

ವಿಟ್ಲ:  ಇಲ್ಲಿನ ಕಂಬಳಬೆಟ್ಟು ಎಂಬಲ್ಲಿ ಸೋಮವಾರ ಸಿಡಿಮದ್ದು ತಯಾರಿ ಸುತ್ತಿದ್ದ ವೇಳೆ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟು ಐವರು ಗಾಯ ಗೊಂಡ ಪ್ರಕರಣಕ್ಕೆ ಸಂಬಂಧಿಸಿ ವಿಧಿವಿ ಜ್ಞಾನ ಅಧಿಕಾರಿಗಳು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.

ಸಿಡಿಮದ್ದುಗ ಳನ್ನು ಒಣಗಿಸಿ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಹಾಕಿ ಎತ್ತಿಡುವ ಸಮಯದಲ್ಲಿ ಶಾರ್ಟ್ ಉಂಟಾಗಿ ಸ್ಫೋಟ ಸಂಭವಿಸಿರುವು ದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಮಾಲೀಕನ ವಿರುದ್ಧ ಸ್ಫೋಟಕ ಕಾಯ್ದೆ ಯಡಿಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಫೋಟದಲ್ಲಿ ಗಾಯಗೊಂಡವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದು ಅಪಾಯದಿಂದ ಪಾರಾಗಿ ದ್ದಾರೆ. ಘಟನೆ ನಡೆದ ಸುತ್ತಮುತ್ತ ದೇಹದ ಭಾಗಗಳು ಕಂಡುಬಂದಿದ್ದು ಅದು ಯಾರದ್ದು  ಎಂಬುದು ಮರಣೋ ತ್ತರ ಪರೀಕ್ಷೆಯಲ್ಲಿ ತಿಳಿದುಬರಲಿದೆ.

ಇಬ್ರಾಹಿಂ ಸಾಹೇಬ್ ಅವರ ಪುತ್ರ ಅಬ್ದುಲ್‌ ಶುಕೂರ್ ಅವರಿಗೆ ಈ ಸಿಡಿ ಮದ್ದು ತಯಾರಿಕೆ ಘಟಕದ ಅನುಮ ತಿಯಿದ್ದು, ಅವರು ವಿದೇಶದಲ್ಲಿದ್ದಾರೆ. ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವೆಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಐಪಿಸಿ 286, 304 (ಉದ್ದೇಶವಲ್ಲದ ಮಾನವ ಹತ್ಯೆ), ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರಾದ ಡಾ. ಗೌತಮ್, ಡಾ. ಬಿ.ಸಿ. ರವೀಂದ್ರ, ಅರುಣ್, ವೀಣಾ, ಕಸ್ತೂರಿ ಒಡೆಯರ್, ಭುವನೇಶ್ವರಿ, ಶ್ರೀಕಾಂತ್ ಮತ್ತಿತರರು ಭಾಗವಹಿಸಿದ್ದರು. ಹೆಚ್ಚು ವರಿ ಎಸ್.ಪಿ ವೇದಮೂರ್ತಿ, ಬಂಟ್ವಾಳ ಡಿವೈಎಸ್‍ಪಿ ರವೀಶ್ ಸಿ.ಆರ್ ಮೊದಲಾ ದವರು ತನಿಖೆ ನಡೆಸಿದರು.

ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಘಟನೆ ನಡೆದ ಸ್ಥಳದಿಂದ ಹಲ ವು ವಸ್ತುಗಳನ್ನು ತನಿಖೆಗಾಗಿ ಸಂಗ್ರಹಿ ಸಿದ್ದಾರೆ. ಸ್ಫೋಟ ಸಂಭವಿಸಿದ ಜಾಗದ ಸಮೀಪದಲ್ಲಿನ ಕೊಟ್ಟಿಗೆಯಲ್ಲಿ ರಾಸಾಯ ನಿಕಗಳನ್ನು ಹಾಗೂ ತಯಾರಿಸಿದ್ದ ಗರ್ನಾ ಲ್‌ಗಳನ್ನು ದಾಸ್ತಾನು ಮಾಡಲಾಗಿತ್ತು.

ಸಲ್ಫರ್‌ ಪೌಡರ್‌ನ ಗೋಣಿ ಚೀಲಗಳು, ಅಲ್ಯೂಮಿನಿಯಮ್ ಪೌಡರ್‌ನ ಬ್ಯಾರಲ್‌ ಗಳು, ಚಾರ್ಕೋಲ್ ಚೀಲಗಳನ್ನು ಕೊಟ್ಟಿ ಗೆಯಲ್ಲೇ ದಾಸ್ತಾನು ಇಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ತಯಾರಿಸಿ ಇಡ ಲಾಗಿದ್ದ ಗರ್ನಾಲ್‌ಗಳನ್ನು ಪೊಲೀಸರು ನೀರಿಗೆ ಹಾಕಿ ನಾಶ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT