ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲ ಗದ್ದೆಗಳಲ್ಲಿ ಅಥ್ಲೀಟುಗಳ ಕಲರವ

Last Updated 16 ಆಗಸ್ಟ್ 2011, 11:15 IST
ಅಕ್ಷರ ಗಾತ್ರ

ಬಡಗಮಿಜಾರು (ಮಂಗಳೂರು): ಮಂಗಳೂರು- ಮೂಡುಬಿದಿರೆ ದಾರಿಯಲ್ಲಿರುವ ಈ ಪುಟ್ಟ ಗ್ರಾಮದ ಹಸಿರು ಪರಿಸರದಲ್ಲಿ ಸೋಮವಾರ ಎಲ್ಲಿ ನೋಡಿದರೂ ಅಥ್ಲೀಟುಗಳು. ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಬಳಿಯಿಂದ ಭೂತನಾಥೇಶ್ವರ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಅಥ್ಲೀಟುಗಳು ಭಾಗವಹಿಸಿದರು.

ದೇವಸ್ಥಾನದ ಬಳಿಯಿಂದ ಸ್ಪರ್ಧೆಗಳು ಆರಂಭವಾದವು. ಭಾಗವಹಿಸುವ ಅಥ್ಲೀಟುಗಳಿಗೆ ಉತ್ಸಾಹ ನೀಡಲು  ಮಾಜಿ ಅಂತರರಾಷ್ಟ್ರೀಯ ಹಾಕಿ ತಾರೆ ಧನರಾಜ್ ಪಿಳ್ಳೆ, ಸಿನಿ ತಾರೆಯರಾದ ಜನಪ್ರಿಯ ನಟಿ ಪೂಜಾ ಗಾಂಧಿ, ನೀತು, ನಟ ಶಿವಧ್ವಜ್ ಇದ್ದರು. ಅವರೇ ಸ್ಪರ್ಧೆಗಳಿಗೆ ನಿಶಾನೆ ಬೀಸಿ ಚಾಲನೆ ನೀಡಿದರು.

ಈ ದೇವಸ್ಥಾನದ ವತಿಯಿಂದ ಹಿಂದೆ ಹಳ್ಳಿ ಕಬಡ್ಡಿ, ಹಳ್ಳಿ ಕ್ರಿಕೆಟ್ ನಡೆದಿತ್ತು. ಈಗ ವೃತ್ತಿಪರ ಮ್ಯಾರಥಾನ್ ಜತೆಗೆ ಹಳ್ಳಿ ಮ್ಯಾರಥಾನ್ ನಡೆದಿದ್ದು ವಿಶೇಷ. ವೃತ್ತಿಪರ ಅಥ್ಲೀಟುಗಳ ವಿಭಾಗದಲ್ಲಿ ಸಾಮಾನ್ಯ ಅಥ್ಲೀಟುಗಳು ಧಿರಿಸು ಇದ್ದರೆ, ಹಳ್ಳಿ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಪಂಚೆ ಉಟ್ಟುಕೊಳ್ಳಬೇಕಾಗಿತ್ತು. ಬಾಲಕಿಯರು ಚೂಡಿದಾರ ಧರಿಸಬೇಕಾಗಿತ್ತು!. ಕೂಟದ ಸ್ವಯಂಸೇವಕರಿಗೂ ಯೂನಿಫಾರಂ ಇತ್ತು. ಕೇಸರಿ ಪಂಚೆ ಜತೆಗೆ ಗಾಂಧಿ ಟೋಪಿ!.

ಹಾಫ್ ಮ್ಯಾರಥಾನ್ ಸ್ಪರ್ಧಿಗಳು 21 ಕಿ.ಮೀ. ಅಂತರ ಕ್ರಮಿಸಬೇಕಾಗಿತ್ತು. ಒಟ್ಟು ಎಂಟು ವಿಭಾಗಗಳಲ್ಲಿ 16 ಸ್ಪರ್ಧೆಗಳು ನಡೆದವು. ಮಾನ್ಸೂನ್ ಮ್ಯಾರಥಾನ್ ಎಂಬ ಹೆಸರಿದ್ದರೂ, ಮಳೆಯಾಗದೇ ಸೆಕೆ ಹೆಚ್ಚಾದ ಕಾರಣ ಅಥ್ಲೀಟುಗಳು ಸುಸ್ತಾಗಿ ಕುಳಿತಿದ್ದ ದೃಶ್ಯ ಕಾಣಿಸಿತು. ಎರಡು ಸಾವಿರಕ್ಕೂ ಅಧಿಕ ಅಥ್ಲೀಟುಗಳು ಭಾಗವಹಿಸಿದ್ದರು. ಪ್ರೇಮನಾಥ ಶೆಟ್ಟಿ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ವಿಜೇತರು ಒಟ್ಟು ಏಳು ಲಕ್ಷ ಬಹುಮಾನ ನಿಧಿಯನ್ನು ಹಂಚಿಕೊಂಡರು. ವಿಜಯನಾಥ ಶೆಟ್ಟಿ ಈ ಸ್ಪರ್ಧೆಗಳ ಮುಖ್ಯ ಸಮನ್ವಯ ಅಧಿಕಾರಿಯಾಗಿದ್ದರು.

ಫಲಿತಾಂಶಗಳು: ಹಾಫ್ ಮ್ಯಾರಥಾನ್ (ಓಪನ್- 21 ಕಿ.ಮೀ.) ಪುರುಷರು: ಅಜಿತ್ ಸಿಂಗ್ -1, ಕೃಷ್ಣ-2, ಬೆಳ್ಳಿಯಪ್ಪ -3 (ಮೂವರೂ ಎಂಇಜಿ). ಮಹಿಳೆಯರ ವಿಭಾಗ: ಕೃಪಾ (ಆಳ್ವಾಸ್ ಕಾಲೇಜು)-1, ಧನುಶ್ರೀ (ಕೆಎಸ್‌ಎಸ್, ಸುಬ್ರಹ್ಮಣ್ಯ)-2, ಸ್ಮಿತಾ ಸಿ. (ಆಳ್ವಾಸ್ ಕಾಲೇಜು)-3.

16 ವರ್ಷದೊಳಗಿನವರ ವಿಭಾಗ (6 ಕಿ.ಮೀ): ತ್ರಿಶೂಲ್ ಎಚ್.ಎನ್. (ಆಳ್ವಾಸ್)-1, ಪುರುಷೋತ್ತಮ (ಸ್ವಾಮಿ ವಿವೇಕಾನಂದ, ಎಡಪದವು)-2, ಪ್ರಕಾಶ್ (ಆಳ್ವಾಸ್)-3; ಬಾಲಕಿಯರು: ರಕ್ಷಿತಾ (ಆಳ್ವಾಸ್)-1, ನಿಖಿತಾ (ಆಳ್ವಾಸ್)-2, ಉಮಾ ಭಾಗ್ಯಲಕ್ಷ್ಮಿ (ಅಲೋಷಿಯಸ್ ಕಾಲೇಜು)-3.

50 ರಿಂದ 60 ವರ್ಷ ವಿಭಾಗ: ಗೊನ್ಸಾಲ್ ಆಸ್ಟಿನ್ ಡಿಸೋಜ (ಮಂಗಳೂರು)-1, ಎಂ.ಎನ್.ರಾಮಯ್ಯ (ಸುಳ್ಯ)-2, ಭೋಜಗೌಡ (ಮಿಜಾರು)-3; ಮಹಿಳೆಯರು: ಅರುಣಕಲಾ ಎಸ್.ರಾವ್ (ಹಿರಿಯಡ್ಕ, ಉಡುಪಿ)-1, ಸುಲತಾ ಕಾಮತ್ (ಕಟಪಾಡಿ)-2, ರತ್ನಾವತಿ (ಪುತ್ತೂರು)-3. 60 ವರ್ಷ ಮೇಲ್ಪಟ್ಟವರು: ದುಗ್ಗಪ್ಪ ಗೌಡ (ಪಂಜ)-1, ಕೆ.ಎಲ್. ಪಾಟೀಲ್ (ಮೈಸೂರು)-2, ಜಗದೀಶ್ (ಮಂಗಳೂರು)-3; ಮಹಿಳೆಯರು: ಮೊನ್ನಮ್ಮ (ಮಿಜಾರು)-1, ರತ್ನಾ (ಬಸ್ತಿಗುಡ್ಡೆ)-2, ದೇವಕಿ (ಮಿಜಾರು)-3.

ಜಿಲ್ಲಾ ಮಟ್ಟ: ಹಳ್ಳಿ ಮ್ಯಾರಥಾನ್ (16ರಿಂದ 50 ವರ್ಷ- 10 ಕಿ.ಮೀ.): ಪುರುಷರು: ದಿನಕರ್ (ಬೆಳ್ಳಾರೆ)-1, ಚೇತನ್ (ಮಡಿಕೇರಿ)-2, ಗಿರೀಶ್ (ಬೆಳ್ಳಾರೆ)-3; ಮಹಿಳೆಯರು: ಶ್ರೇಯಾ (ನವೋದಯ, ಬೆಟ್ಟಂಪಾಡಿ)-1, ಕವಿತಾ (ಸುಳ್ಯ)-2, ಮೋನಿಕಾ ಪ್ರಕಾಶ್ (ಕೊಡಗು)-3.

14 ವರ್ಷದೊಳಗಿನವರಿಗೆ (4 ಕಿ.ಮೀ.): ಬಾಲಕರು: ಸುದೀಪ್ (ಬಿಆರ್‌ಪಿ ಶಾಲೆ, ಮೂಡುಬಿದಿರೆ)-1, ಪ್ರದೀಪ್ (ಬಿಆರ್‌ಪಿ ಶಾಲೆ)-2, ಆರನ್ (ವಗ್ಗ)-3; ಬಾಲಕಿಯರು: ದೀಕ್ಷಾ (ನವೋದಯ, ಬೆಟ್ಟಂಪಾಡಿ)-1, ಜಯಲಕ್ಷ್ಮೀ (ನಿಡ್ಡೋಡಿ)-2, ಸುಪ್ರೀತಾ (ನಿಡ್ಡೋಡಿ)-3.

14 ರಿಂದ 16 ವರ್ಷ (6 ಕಿ.ಮೀ.): ಅರುಣ್ (ಬಿಆರ್‌ಪಿ ಶಾಲೆ)-1, ಅಭಿಷೇಕ್ (ಸ್ವಾಮಿ ವಿವೇಕಾನಂದ, ಎಡಪದವು)-2, ಹೇಮಚಂದ್ರ (ಸ್ವಾಮಿ ವಿವೇಕಾನಂದ, ಎಡಪದವು)-3; ಬಾಲಕಿಯರು: ನೆಸ್ಲಿನ್ ಪ್ರಿಯಾ ಡಿಸೋಜ (ವಗ್ಗ)-1, ಕೆ.ಕೆ.ಅಕ್ಷತಾ (ರೋಸಾ ಮಿಸ್ಟಿಕಾ, ಕಿನ್ನಿಕಂಬ್ಳ)-2, ಧನುಶ್ರೀ (ವಗ್ಗ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT