ಗುರುವಾರ , ಮಾರ್ಚ್ 23, 2023
29 °C

₹ 2.84 ಲಕ್ಷ ಮೌಲ್ಯದ ಗಾಂಜಾ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಲ್ಲಿನ ಕರ್ನಾಟಕ ಗೃಹ ಮಂಡಳಿಯ ತುಂಗಭದ್ರಾ ಬಡಾವಣೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, ₹ 2.84 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಸ್‌ ಬುಕ್ಕಿಂಗ್ ಕೆಲಸ ಮಾಡುತ್ತಿದ್ದ ಶಿವಮೊಗ್ಗದ ವೆಂಕಟೇಶ್ ನಗರದ ರವಿಶೆಟ್ಟಿ (30), ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪೈಚಾರ್ ಗ್ರಾಮದ ಅಬ್ದುಲ್ ಹಾಶಿಕ್ (30) ಬಂಧಿತರು.

ಕುಂದವಾಡ–ದಾವಣಗೆರೆ ಮೊದಲ ಕಮಾನ್ ಹತ್ತಿರ ಸರ್ವೀಸ್ ರಸ್ತೆಯಿಂದ ತುಂಗಭದ್ರಾ ಬಡಾವಣೆ ಕಡೆಗೆ ಹೋಗುವ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಡಿಸಿಆರ್‌ಬಿ ಡಿವೈಎಸ್‌ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ ಸಿಇಎನ್ ಠಾಣೆಯ ಪಿಎಸ್‌ಐ ಬಿ.ವಿ.ಗಿರೀಶ ಹಾಗೂ ಸಿಬ್ಬಂದಿ ದಾಳಿ ನಡೆಸಿ 11 ಕೆಜಿ 162 ಗ್ರಾಂ ಗಾಂಜಾ ಹಾಗೂ ₹ 800 ನಗದು ವಶಪಡಿಸಿದ್ದಾರೆ.

ಸಿಬ್ಬಂದಿ ಪಿ.ನಾಗರಾಜ, ಬಿ.ನಾಗರಾಜ, ಎಚ್‌.ಜೆ. ದ್ಯಾಮೇಶ್, ಎಸ್‌.ಲೋಹಿತ್ ಎಸ್.ಮಲ್ಲಿಕಾರ್ಜುನ ಹಾದಿಮನಿ, ಎಸ್.ಗೋವಿಂದರಾಜ, ಎಸ್‌.ಎಸ್.ಕೊಟ್ರೇಶ್, ಬಿ.ಕೆ.ಲಿಂಗರಾಜ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.