ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿಗಿಂತ ಹೆಚ್ಚಿನ ಮರಳು ಸಾಗಣೆ: ಎರಡು ಲಾರಿಗಳಿಗೆ ₹46,200 ದಂಡ

Published 10 ಸೆಪ್ಟೆಂಬರ್ 2023, 5:32 IST
Last Updated 10 ಸೆಪ್ಟೆಂಬರ್ 2023, 5:32 IST
ಅಕ್ಷರ ಗಾತ್ರ

ಹರಿಹರ: ಅನುಮತಿಗಿಂತ ಹೆಚ್ಚಿನ ತೂಕದ ಮರಳನ್ನು ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ಪತ್ತೆಹಚ್ಚಿ ₹46,200 ದಂಡ ವಿಧಿಸಲಾಗಿದೆ.

ರಾಣೆಬೆನ್ನೂರು ತಾಲ್ಲೂಕಿನ ನಾಗೇನಹಳ್ಳಿ ಮತ್ತು ಮುದೇನೂರು ಗ್ರಾಮಗಳ ಮರಳಿನ ಪಾಯಿಂಟ್‌ಗಳಿಂದ ಎರಡು ಲಾರಿಗಳಲ್ಲಿ ಸಾಗಣೆ ಮಾಡಲಾಗುತ್ತಿತ್ತು. ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಲಾರಿಗಳನ್ನು ಶುಕ್ರವಾರ ತಡೆದು ಪರಿಶೀಲಿಸಿ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು.

ಅಧಿಕ ತೂಕ ಕಂಡುಬಂದಿದ್ದು ಖಚಿತವಾಗುತ್ತಿದ್ದಂತೆ ಗಣಿ ಇಲಾಖೆ ಅಧಿಕಾರಿಗಳು ಒಂದು ಲಾರಿಗೆ ₹21,560 ಮತ್ತು ಇನ್ನೊಂದು ಲಾರಿಗೆ ₹24,640 ದಂಡ ವಿಧಿಸಿದ್ದಾರೆ.

‘ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಪ್ರಮಾಣದ ಮರಳು ಸಾಗಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಸಿದ್ದಾರೆ.

ಅಪರಿಚಿತ ಮಹಿಳೆ ಶವ ಪತ್ತೆ

ಮಲೇಬೆನ್ನೂರು: ಪಟ್ಟಣದ ಹೊರವಲಯದ ಭದ್ರಾ ಉಪನಾಲೆಯಲ್ಲಿ ಅನಾಮಧೇಯ ಮಹಿಳೆ ಶವ ಶನಿವಾರ ಪತ್ತೆಯಾಗಿದೆ.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಹೆಚ್ಚಿನ ಮಾಹಿತಿಗೆ ಪೊಲೀಸ್ ಠಾಣೆ ಸಂಪರ್ಕಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT