ಕೊಡಗಿನ ಸಂತ್ರಸ್ತರಿಗೆ ನೆರವಾದ ದಾವಣಗೆರೆ ಬಿಎಸ್‌ಸಿ ಮಳಿಗೆ

7

ಕೊಡಗಿನ ಸಂತ್ರಸ್ತರಿಗೆ ನೆರವಾದ ದಾವಣಗೆರೆ ಬಿಎಸ್‌ಸಿ ಮಳಿಗೆ

Published:
Updated:
Deccan Herald

ದಾವಣಗೆರೆ: ನಗರದ ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌ ಜವಳಿ ಮಳಿಗೆಯು ಅಪಾರ ಪ್ರಮಾಣದಲ್ಲಿ ಉಡುಪು, ಹೊದಿಕೆ, ಕುಡಿಯುವ ನೀರು ಸೇರಿ ಅಂದಾಜು ₹ 5 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಶನಿವಾರ ರಾತ್ರಿ ರವಾನಿಸುವ ಮೂಲಕ ಮಹಾಮಳೆಗೆ ನಲುಗಿದ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವಾಗಿದೆ.

ಮಳಿಗೆಯ ಮಾಲೀಕ ಬಿ.ಸಿ. ಉಮಾಪತಿ ಹಾಗೂ ಬಿ.ಯು. ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ಪರಿಹಾರ ಸಾಮಗ್ರಿಗಳನ್ನು ಕಾಳಿದಾಸ ರಸ್ತೆಯಲ್ಲಿರುವ ಮಳಿಗೆಯಲ್ಲಿ ಪ್ಯಾಕ್‌ ಮಾಡಿಸಲಾಯಿತು.

ಮಹಿಳೆಯರಿಗಾಗಿ ಸ್ವೆಟರ್‌, ನೈಟಿ, ಒಳಉಡುಪು, ಸ್ಯಾನಿಟರಿ ಪ್ಯಾಡ್‌ಗಳು ಹಾಗೂ ಪುರುಷರಿಗಾಗಿ ಪ್ಯಾಂಟ್‌, ನೈಟ್‌ ಪ್ಯಾಂಟ್‌, ಟಿಶರ್ಟ್‌, ಸ್ವೆಟರ್‌, ಜೀನ್ಸ್‌, ಲುಂಗಿ ಮತ್ತು ಮಕ್ಕಳಿಗಾಗಿ ವಿಂಟರ್‌ ಕ್ಯಾಪ್‌, ಡೈಪರ್‌, ಟಿಶರ್ಟ್‌, ಶಾರ್ಟ್ಸ್‌, ಪ್ಯಾಂಟ್‌ಗಳು ಹಾಗೂ ಹೊದಿಕೆ, ಛತ್ರಿ, ಚಾಪೆ, ಸೊಳ್ಳೆ ಪರದೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ರವಾನಿಸಲಾಗಿದೆ. ಬಿಸ್ಕತ್‌, ಮ್ಯಾಗಿ ಪ್ಯಾಕೆಟ್‌, ಉಪ್ಪಿನಕಾಯಿ, ಜ್ಯೂಸ್‌ ಬಾಟಲಿ, ಕುಡಿಯುವ ನೀರಿನ ಬಾಟಲಿಗಳನ್ನೂ ಕಳುಹಿಸಿಕೊಡಲಾಗಿದೆ.

‘ಮೈಸೂರಿನ ರೋಟರಿ ಕ್ಲಬ್‌ ಸಹಯೋಗದಲ್ಲಿ ಸಂತ್ರಸ್ತರಿಗೆ ವಿತರಿಸಲು ಪರಿಹಾರ ಸಾಮಗ್ರಿಗಳನ್ನು ನಮ್ಮ ಲಾರಿಯಲ್ಲಿ ಮೈಸೂರಿಗೆ ಕಳುಹಿಸಿಕೊಡಲಾಗಿದೆ. ರೋಟರಿ ಕ್ಲಬ್‌ನ ಸದಸ್ಯರ ಜೊತೆಗೆ ಸೇರಿ ಸಂತ್ರಸ್ತರಿಗೆ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ. ಕೇರಳ ರಾಜ್ಯದ ಸಂತ್ರಸ್ತರಿಗೆ ನೆರವಾಗಲು ಸ್ವಾತಂತ್ರ್ಯೋತ್ಸವದ ದಿನದಂದು ಒಟ್ಟು ₹ 10 ಲಕ್ಷ ಮೌಲ್ಯದ ವಿವಿಧ ಉಡುಪುಗಳನ್ನು ವಾಯನಾಡಿಗೆ ಕಳುಹಿಸಿಕೊಡಲಾಗಿತ್ತು’ ಎಂದು ಬಿ.ಯು. ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆರ್‌.ಎಸ್‌.ಎಸ್‌ ನಿಧಿ ಸಂಗ್ರಹಣೆ ಇಂದು

ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರ್‌.ಎಸ್‌.ಎಸ್‌) ಕೇರಳ ಹಾಗೂ ಕೊಡಗಿನ ನೆರೆ ಸಂತ್ರಸ್ತರಿಗಾಗಿ ಆಗಸ್ಟ್‌ 19ರಂದು ಬೆಳಿಗ್ಗೆ 11ರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನಿಧಿ ಸಂಗ್ರಹಣೆ ಮಾಡಲಾಗುವುದು. ಜಯದೇವ ವೃತ್ತದಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ನಾಗರಿಕರು ನೆರೆ ಸಂತ್ರಸ್ತರಿಗೆ ಸಹಾಯ ಮಾಡಬೇಕು ಎಂದು ಆರ್‌.ಎಸ್‌.ಎಸ್‌. ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌.ಯು.ಸಿ.ಐ.ಸಿಯಿಂದಲೂ ಸಂಗ್ರಹಣೆ

ದಾವಣಗೆರೆ: ಕೇರಳ ಹಾಗೂ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಸಂತ್ರಸ್ತರಾದವರಿಗೆ ನೆರವಾಗಲು ಸೋಷಲಿಸ್ಟ್‌ ಯೂನಿಟ್‌ ಸೆಂಟರ್‌ ಆಫ್‌ ಇಂಡಿಯಾ ಕಮ್ಯುನಿಸ್ಟ್‌ (ಎಸ್‌.ಯು.ಸಿ.ಐ.–ಸಿ) ಪಕ್ಷದ ಆಶ್ರಯದಲ್ಲಿ ಬಟ್ಟೆ, ಔಷಧಿ ಹಾಗೂ ನಿಧಿ ಸಂಗ್ರಹಿಸುವ ಕಾರ್ಯಕ್ರಮವನ್ನು ಆಗಸ್ಟ್‌ 19ರಂದು ಮಧ್ಯಾಹ್ನ 12ಕ್ಕೆ ನಗರದ ಗಡಿಯಾರ ಕಂಬದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಪರಶುರಾಮ್‌ ಎಸ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಎಸ್‌ಸಿಯಿಂದ ಕೊಡಗಿಗೆ ಕಳುಹಿಸಿದ ವಸ್ತುಗಳ ವಿವರ

2,380 - ಮಹಿಳೆಯರ ಉಡುಪು

1,060 - ಪುರುಷರ ಉಡುಪು

540 ಸ್ಯಾನಿಟರಿ ಪ್ಯಾಡ್‌

648 - ಬೇಬಿ ಡೈಪರ್‌

96  - ಸೊಳ್ಳೆ ಪರದೆ

185 - ಚಾದರ

30 -  ಬಾಕ್ಸ್‌ ಬಿಸ್ಕತ್‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !