ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಯಲ್ಲಿ ಕ್ಯಾನ್ಸರ್ ನಿರೋಧಕ ಗುಣ: ಸಂಶೋಧನಾ ವರದಿ

Published 4 ಏಪ್ರಿಲ್ 2024, 0:02 IST
Last Updated 4 ಏಪ್ರಿಲ್ 2024, 0:02 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಅಡಿಕೆಯಲ್ಲಿ ಕ್ಯಾನ್ಸರ್‌ ನಿರೋಧಕ ಅಂಶ ಇದೆ ಎಂದು ಇಲ್ಲಿನ ನೆಕ್ಸ್‌ಜೆನ್ ಸಂಸ್ಥೆ ನಡೆಸಿದ ಸಂಶೋಧನೆ ಬಹಿರಂಗ ಪಡಿಸಿದೆ.

ಅಡಿಕೆಯಲ್ಲಿ ಆಂಟಿ ಬ್ಯಾಕ್ಟೀರಿಯ, ಆಂಟಿ ಫಂಗಸ್, ಆಂಟಿ ಆಕ್ಸಿಡಂಟ್, ಆಂಟಿಡಯಾಬಿಟಿಕ್, ಆಂಟಿಇಫ್ಲಾಮೆಟರಿ, ಗಾಯ ವಾಸಿಗೊಳಿಸುವ, ಸೈಟೋಟಾಕ್ಸಿಕ್ ಜೀವಶಾಸ್ತ್ರೀಯ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂಬ ಅಂಶವೂ ಸಂಶೋಧನೆಯಲ್ಲಿ ಗೊತ್ತಾಗಿದೆ.

ನೆಕ್ಸ್‌ಜೆನ್ ಸಂಸ್ಥೆ ಸೈಟಾಕ್ಸನ್ ಬಯೋಸಲ್ಯುಷನ್ ಪ್ರೈ. ಲಿಮಿಟೆಡ್‌ನ ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನಾ ವರದಿಯಲ್ಲಿ ಈ ಅಂಶ ಪತ್ತೆಯಾಗಿದೆ ಎಂದು ನೆಕ್ಸ್‌ಜೆನ್ ಸಂಸ್ಥಾಪಕ ರಘು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪರಿಶುದ್ಧ ಅಡಿಕೆಯ ಹಾಲನ್ನು ಪ್ರಯೋಗಶಾಲೆಯಲ್ಲಿ ವಿವಿಧ ಹಂತದ ಪ್ರಯೋಗಗಳಿಗೆ ಒಳಪಡಿಸಿದಾಗ ಕ್ಯಾನ್ಸರ್‌ ನಿರೋಧಕ ಅಂಶ ಇರುವುದು ತಿಳಿದುಬಂದಿದೆ. ಇದರಿಂದ ರೈತರಲ್ಲಿ ಆತ್ಮವಿಶ್ವಾಸ ವೃದ್ಧಿಸಲಿದೆ. ಆಸಕ್ತ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು ಹೆಚ್ಚಿನ ಆಸಕ್ತಿ ತೋರಿದರೆ ನೆಕ್ಸ್‌ಜೆನ್ ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.

‘ಅಡಿಕೆ ಕ್ಯಾನ್ಸರ್ ಕಾರಕ, ನಿಷೇಧ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲಿ ಈ ವರದಿಯಿಂದ ಧನಾತ್ಮಕ ಫಲಿತಾಂಶ ದೊರೆತಿದೆ. 100 ಕೆ.ಜಿ. ಸುಲಿದ ಹಸಿ ಅಡಿಕೆಗಳನ್ನು ಅಡಿಕೆ ಡ್ರಯರ್‌ನಲ್ಲಿ ಸಂಸ್ಕರಿಸಿದರೆ ಕನಿಷ್ಠ 1 ಲೀ. ಪರಿಶುದ್ಧ ಹಾಲು ದೊರೆಯುತ್ತದೆ. ಈ ಹಾಲನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು ಎಂದು ಅವರು ಹೇಳಿದರು.

ನೆಕ್ಸ್‌ಜೆನ್ ಸಂಸ್ಥೆಯಿಂದ ಹಿಂದೆ ಅಡಿಕೆ ಬಾಯ್ಲರ್‌ ಆವಿಷ್ಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT