ಬುಧವಾರ, ಜೂನ್ 29, 2022
27 °C
ಮಕ್ಕಳ ಸಹಾಯವಾಣಿ 1098 ಮಾಸಾಚರಣೆ,

ಸಂಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಕರೆ ಮಾಡಿ: ಜಾಗೃತಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಕ್ಕಳು ಸಂಕಷ್ಟಗಳಿಗೆ ಸೀಲುಕುವ ಮುನ್ನ ಅವರು ಸುರಕ್ಷಿತರಾಗಿರುವಂತೆ ನೋಡಿ ಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ರೈಲ್ವೆ ರಕ್ಷಣಾ ದಳದ ಉಪನಿರೀಕ್ಷಕ ಎ. ಕೊಂಡಾರೆಡ್ಡಿ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಮಕ್ಕಳ ಕಲ್ಯಾಣ ಸಮಿತಿ, ರೈಲ್ವೆ ರಕ್ಷಣಾ ದಳ, ರೈಲ್ವೆ ಪೊಲೀಸ್ ಮತ್ತು ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಸಹಾಯವಾಣಿ 1098 ಮಾಸಾಚರಣೆ ಹಾಗೂ ರೈಲ್ವೆ ಪ್ರಯಾಣಿಕರ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಮಂಜುನಾಥ ಮಾತನಾಡಿ, ‘ಮಕ್ಕಳ ಸುರಕ್ಷತೆ-ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಅಭಿಯಾನ ಮಾಡುವ ಮೂಲಕ ಸಾಗಾಣಿಕೆಗೆ ಸಿಲುಕಿದ ಮಕ್ಕಳನ್ನು ಗುರುತಿಸಿ ರಕ್ಷಣೆ ಮಾಡಬೇಕು’ ಎಂದು ತಿಳಿಸಿದರು.

ಮಕ್ಕಳ ರಕ್ಷಣೆಯಲ್ಲಿ ಸಾರ್ವಜನಿಕರ ಸಹಕಾರ ತೀರ ಅವಶ್ಯ. ಮಕ್ಕಳ ಕಲ್ಯಾಣ ಸಮಿತಿಗೆ ಹಾಗೂ ಮಕ್ಕಳ ಸಹಾಯವಾಣಿಗೆ ಜನರು ಸಹಕಾರ ನೀಡಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಮಂಜುಳಾ ಮನವಿ ಮಾಡಿದರು.

ರೈಲು ಪ್ರಯಾಣದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ರೈಲ್ವೆ ರಕ್ಷಣಾ ದಳದ ಸಹಾಯಕ ನಿರೀಕ್ಷಕಿ ಲಕ್ಷ್ಮಿ ಪಾಟೀಲ್ ತಿಳಿಸಿದರು. ರೈಲ್ವೆ ರಕ್ಷಣಾ ದಳದ ಸಹಾಯವಾಣಿ ಸಂಖ್ಯೆ139ಕ್ಕೆ ಕರೆ ಮಾಡಿ ರೈಲೈ ಪ್ರಯಾಣಿಕರು ಸಹಾಯ ಪಡೆಯಬಹುದು
ಎಂದರು.

ಮಕ್ಕಳ ಸಹಾಯವಾಣಿ ಕೊಲ್ಯಾಬ್ ನ ಸಂಯೋಜಕ ಕೊಟ್ರೇಶ್ ಟಿ.ಎಂ., ‘ಸಂಕಷ್ಟದಲ್ಲಿರುವ ಮಕ್ಕಳ ನೆರವಿಗಾಗಿ ರಾಷ್ಟ್ರೀಯ ಉಚಿತ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿದರೆ ಮಕ್ಕಳ ನೆರವಿಗೆ ಧಾವಿಸಿ ಅವರಿಗೆ ಪೋಷಣೆ ಮತ್ತು ರಕ್ಷಣೆ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಮುಖ್ಯ ಟಿಕೆಟ್ ತಪಾಸಣಾಧಿಕಾರಿಗಳಾದ ಜಿ.ಆರ್.ಶ್ರೀನಿವಾಸ್ ಮಾತನಾಡಿದರು. ಕ್ರೀಂ ಯೋಜನೆಯ ಸಂಯೋಜಕ ಮಂಜಪ್ಪ ಬಿ. ಮಾತನಾಡಿದರು.

ದಿನೇಶ್ ಕೆ.ಎನ್. ಸ್ವಾಗತಿಸಿದರು. ಹರ್ಷದ್ ಅಲಿ ಟಿ.ಎ. ನಿರೂಪಿಸಿದರು,‌ ಸ್ವಾಮಿ ಬಿ. ವಂದಿಸಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮನಾಯ್ಕ, ಸ್ಟೇಷನ್ ಮಾಸ್ಟರ್ ಅಭಯ್ ಕುಮಾರ್, ಜಿ.ಆರ್.ಪಿ ಎಸ್.ಐ. ಶಂಕರ್.ವೈ, ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡದ ರವಿ.ಬಿ., ಮಂಜುನಾಥ ಡಿ., ಮಂಜುಳ ವಿ., ನಾಗರಾಜ್ ಟಿ., ತೆರೆದತಂಗುದಾಣ ಯೋಜನೆಯ ಸಂಯೋಜಕ ಎಚ್. ಸುನಿಲ್, ಕಾರ್ಯಕರ್ತರಾದ ಹೊನ್ನಪ್ಪ ಎಂ., ನಟರಾಜ್ ಎನ್., ರೈಲ್ವೆ ರಕ್ಷಣಾ ದಳ ಮತ್ತು ರೈಲ್ವೆ ಪೊಲೀಸ್ ಸಿಬ್ಬಂದಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು