ಬುಧವಾರ, ಮೇ 12, 2021
23 °C

ಸಿಲಿಂಡರ್ ಸ್ಫೋಟ: ರಂಜಾನ್ ಹಬ್ಬಕ್ಕೆ ಕೂಡಿಟ್ಟ ಹಣ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ಬಸವರಾಜ‍‍ಪೇಟೆಯ ಹುಬ್ಲಿ ಚೌಡಪ್ಪ ರಸ್ತೆಯಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸೋರಿಕೆಯಾಗಿ ಹಲವು ವಸ್ತುಗಳು ಭಸ್ಮವಾಗಿವೆ. ಅಲ್ಲದೇ ರಂಜಾನ್ ಹಬ್ಬಕ್ಕೆ ಜೋಡಿಸಿದ್ದ ಹಣವೂ ಬೆಂಕಿಗೆ ಆಹುತಿಯಾಗಿದೆ.

ಆಟೊ ಚಾಲಕ ಸಿಕಂದರ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಪಕ್ಕದ ಜಲೀನ್ ಅವರ ಮನೆಗಳು ಹೊತ್ತಿ ಉರಿದಿವೆ. ಅಲ್ಲದೇ ರಂಜಾನ್ ಹಬ್ಬಕ್ಕೆ ಕೂಡಿಸಿದ್ದ ₹ 100ರ ನೋಟುಗಳ ಕಂತೆ ಭಸ್ಮವಾಗಿದೆ. ಹಣ ಎಷ್ಟೇಂದು ತಿಳಿದು ಬಂದಿಲ್ಲ. ಇನ್ನು ಪಾತ್ರೆ ಪಗಡೆ, ಬಟ್ಟೆ, ಚಿನ್ನ ಬೆಳ್ಳಿ ಬೆಂಕಿಗೆ ಆಹುತಿಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು