‘ಹೆಸರು ಹಾಗೂ ಸೂರ್ಯಕಾಂತಿಯನ್ನು ಎಫ್‌ಎಕ್ಯೂ ಗುಣಮಟ್ಟದಲ್ಲಿ ಖರೀದಿಸಲು ಅನುಮತಿ ನೀಡಿದ ಪಟ್ಟಿಯಲ್ಲಿ ದಾವಣಗೆರೆ ಸೇರಿಲ್ಲ. ಜಿಲ್ಲೆಯಲ್ಲಿ ಸೂರ್ಯಕಾಂತಿ 910 ಹೆಕ್ಟೇರ್ ಬೆಳೆ ವಿಸ್ತೀರ್ಣ ಹೊಂದಿದ್ದು, 735 ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆ ಇದೆ. ಹೆಸರು ಬೆಳೆ 37 ಮೆಟ್ರಿಕ್ ಟನ್ ಉತ್ಪಾದನೆಯಾಗಲಿದೆ. ಸೂರ್ಯಕಾಂತಿ ಹಾಗೂ ಹೆಸರು ಬೆಳೆ ಆವಕ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.