ಬುಧವಾರ, 11 ಫೆಬ್ರುವರಿ 2026
×
ADVERTISEMENT
ADVERTISEMENT

ದಾವಣಗೆರೆ: ‘ಅಕ್ರಮ–ಸಕ್ರಮ’ ರದ್ದು ಪರಿಣಾಮ; ಉಚಿತ ಟಿ.ಸಿ.ಯತ್ತ ರೈತರ ಆಸಕ್ತಿ

Published : 11 ಫೆಬ್ರುವರಿ 2026, 7:28 IST
Last Updated : 11 ಫೆಬ್ರುವರಿ 2026, 7:28 IST
ಫಾಲೋ ಮಾಡಿ
Comments
ಶೀಘ್ರ ಸಂಪರ್ಕ ಯೋಜನೆಯಡಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಪರಿಶೀಲಿಸಿ ತ್ವರಿತಗತಿಯಲ್ಲಿ ಅನುಮತಿ ನೀಡುತ್ತಿದ್ದೇವೆ. ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ.
ಎ.ಕೆ. ತಿಪ್ಪೇಸ್ವಾಮಿ, ಕಾರ್ಯಪಾಲಕ ಎಂಜಿನಿಯರ್‌, ‘ಬೆಸ್ಕಾಂ’, ದಾವಣಗೆರೆ ವಿಭಾಗ
ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ಸಂಪರ್ಕ ಪಡೆದ ರೈತರಿಗೆ ದಂಡ ವಿಧಿಸುತ್ತಿಲ್ಲ. ಅನುಮತಿ ಪಡೆದು ವಿದ್ಯುತ್‌ ಸಂಪರ್ಕ ಪಡೆಯುವಂತೆ ತಿಳಿವಳಿಕೆ ನೀಡಲಾಗುತ್ತಿದೆ
ಪಿ.ವಿನಯ್‌ಕುಮಾರ್‌, ಕಾರ್ಯಪಾಲಕ ಎಂಜಿನಿಯರ್‌, ‘ಬೆಸ್ಕಾಂ’, ಹರಿಹರ ವಿಭಾಗ
ಸಂಪರ್ಕ ಕಡಿತಕ್ಕೆ ಸೂಚನೆ
ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ಅನಧಿಕೃತವಾಗಿ ಪಡೆದುಕೊಂಡ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುವಂತೆ ‘ಬೆಸ್ಕಾಂ’ ಕೇಂದ್ರ ಕಚೇರಿ ಸೂಚಿಸಿದೆ. ಇಂತಹ ಕೃಷಿ ಪಂಪ್‌ಸೆಟ್‌ಗಳನ್ನು ಪತ್ತೆ ಮಾಡುವ ಕಾರ್ಯ ಮಾರ್ಚ್‌ನಿಂದ ಆರಂಭವಾಗುವ ಸಾಧ್ಯತೆ ಇದೆ. ‘ಅನಧಿಕೃತ ವಿದ್ಯುತ್‌ ಸಂಪರ್ಕ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕಾರ್ಯವನ್ನು ಜಾಗೃತ ದಳ ಮಾಡುತ್ತಿದೆ. ಮನೆ, ಕೈಗಾರಿಕೆ, ಅಂಗಡಿ ಸೇರಿದಂತೆ ಇತರ ಉದ್ದೇಶಕ್ಕೆ ಅನುಮತಿ ಪಡೆಯದೇ ವಿದ್ಯುತ್‌ ಸಂಪರ್ಕ ಪಡೆದುಕೊಂಡವರಿಗೆ ದಂಡ ವಿಧಿಸಲಾಗುತ್ತಿದೆ. ಕೃಷಿ ಉದ್ದೇಶಕ್ಕೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದವರಿಗೆ ಈವರೆಗೆ ಇಂತಹ ದಂಡವಿಧಿಸಿಲ್ಲ. ಆದರೆ, ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಸೂಚನೆ ಬಂದಿದೆ’ ಎಂದು ‘ಬೆಸ್ಕಾಂ’ ಮೂಲಗಳು ಖಚಿತಪಡಿಸಿವೆ.
ಜಗಳೂರಿನಲ್ಲಿ ಬೇಡಿಕೆ ಹೆಚ್ಚು
ಕೃಷಿ ಪಂಪ್‌ಸೆಟ್‌ಗಳಿಗೆ ಶೀಘ್ರ ಸಂಪರ್ಕ (ತತ್ಕಾಲ್‌) ಯೋಜನೆಯಡಿ ವಿದ್ಯುತ್‌ ಪೂರೈಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಜಗಳೂರು ತಾಲ್ಲೂಕಿನ ರೈತರ ಪಾಲು ಹೆಚ್ಚಿದೆ. ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಜಗಳೂರಿನಿಂದ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ‘ಜಗಳೂರು ತಾಲ್ಲೂಕು ಮಳೆಯಾಶ್ರಿತ. ಕೆರೆ ತುಂಬಿಸುವ ಯೋಜನೆಯಡಿ ಹಲವು ಜಲಮೂಲಗಳು ಭರ್ತಿಯಾಗಿವೆ. ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಅಂತರ್ಜಲ ಮಟ್ಟವೂ ಹೆಚ್ಚಿದೆ. ಇದರಿಂದ ರೈತರು ಅಡಿಕೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳತ್ತ ಆಸಕ್ತಿ ತೋರುತ್ತಿದ್ದಾರೆ. ಕೊಳವೆಬಾವಿ ಕೊರೆಸಿ ವಿದ್ಯುತ್‌ ಸಂಪರ್ಕಕ್ಕೆ ‘ತತ್ಕಾಲ್‌’ ಅಡಿ ಅರ್ಜಿ ಸಲ್ಲಿಸುತ್ತಿದ್ದಾರೆ’ ಎಂದು ‘ಬೆಸ್ಕಾಂ’ ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT