ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಬಿಜೆಪಿ ಅಭ್ಯರ್ಥಿಯೇ ಮೊದಲ ಮತದಾರ, ಕೈಕೊಟ್ಟ ಇವಿಎಂ!

Last Updated 23 ಏಪ್ರಿಲ್ 2019, 5:24 IST
ಅಕ್ಷರ ಗಾತ್ರ

ದಾವಣಗೆರೆ: ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಮತದಾನ ಮಾಡುವ ವೇಳೆ ಇವಿಎಂ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ದಾವಣಗೆರೆಯ 236ನೇ ಮತಗಟ್ಟೆ ಮಾಗನೂರು ಬಸಪ್ಪ ಶಾಲೆಯ ಮತದಾನ ಕೇಂದ್ರದಲ್ಲಿ ಸಿದ್ದೇಶ್ವರ್3 ನಿಮಿಷ ಕಾದು ಕುಳಿತರು.

ಬಳಿಕ ಸಿದ್ದೇಶ್ವರ್ ದಂಪತಿ ಮತದಾನ ಮಾಡಿದರು. ಈ ಕೇಂದ್ರದಲ್ಲಿ ಅವರೇ ಮೊದಲ ಮತ ಚಲಾಯಿಸಿದ್ದು ವಿಶೇಷ.

ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಮತದಾನ ಮಾಡಿದರು. ಮತ ಚಲಾಯಿಸಲು ವೃದ್ದರು,ವಯಸ್ಕರು,ಯುವಕ ಯುವತಿಯರು ಸಾಲು ಗಟ್ಟಿ ನಿಂತಿದ್ದು ಕಂಡು ಬಂತು.

ಜಿಲ್ಲೆಯಲ್ಲಿ ಒಟ್ಟು 8,24,331 ಪುರುಷ ಮತದಾರರು, 8,10,400 ಮಹಿಳಾ ಮತದಾರರು ಹಾಗೂ 129 ಇತರೆ ಮತದಾರರು ಸೇರಿದಂತೆ ಒಟ್ಟು 16,34,860 ಮತದಾರರು ಇದ್ದಾರೆ. ಈ ಬಾರಿ ಮೈತ್ರಿ ಅಭ್ಯರ್ಥಿ ಒಬ್ಬರು, ಬಿಜೆಪಿ ಅಭ್ಯರ್ಥಿ ಒಬ್ಬರು ಹಾಗೂ ಪಕ್ಷೇತರ ಅಭ್ಯರ್ಥಿಗಳು 23 ಸೇರಿ 25 ಮಂದಿ ಕಣದಲ್ಲಿದ್ದಾರೆ. ಜಗಳೂರಿನಲ್ಲಿ 262, ಹರಪನಹಳ್ಳಿಯಲ್ಲಿ 257, ಹರಿಹರದಲ್ಲಿ 240, ದಾವಣಗೆರೆ ಉತ್ತರ 245, ದಾವಣಗೆರೆ ದಕ್ಷಿಣದಲ್ಲಿ 211, ಮತಗಟ್ಟೆಗಳಿದ್ದು ಮಾಯಕೊಂಡದಲ್ಲಿ 240, ಚನ್ನಗಿರಿಯಲ್ಲಿ 249, ಮತ್ತು ಹೊನ್ನಾಳಿಯಲ್ಲಿ 245 ಮತಗಟ್ಟೆಗಳು ಸೇರಿದಂತೆ ಒಟ್ಟು 1949 ಮತಗಟ್ಟೆಗಳಿವೆ.

ಕಾಂಗ್ರೆಸ್ ಅಭ್ಯರ್ಥಿ ಮಂಜಪ್ಪ ಮತದಾನ

ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಎಚ್. ಬಿ. ಮಂಜಪ್ಪಪತ್ನಿ ಲಕ್ಷ್ಮೀ ಅವರೊಂದಿಗೆ ಬಂದು ಜಿಲ್ಲೆಯ ಹೊನ್ನಾಳಿ ಪಟ್ಟಣದ ದೇವನಾಯ್ಕನಹಲ್ಲಿ ಮತಗಟ್ಟೆ 101ರಲ್ಲಿ ಮತದಾನ ಮಾಡಿದರು.

ಶಾಮನೂರು ಶಿವಶಂಕರಪ್ಪನವರು ದಾವಣಗೆರೆಯನ್ನು ಸಿಂಗಾಪುರ ಸಿಟಿ ತರ ಮಾಡಿದ್ದಾರೆ.ದಾವಣಗೆರೆ ಸಂಸದ ಸಿದ್ದೇಶ್ವರ್ ಯಾವುದೇ ಕೆಲಸ ಮಾಡಿಲ್ಲ.ಹೀಗಾಗಿ ಜನ ಬದಲಾವಣೆ ಬಯಸಿದ್ದಾರೆ. ಬಿಜೆಪಿಯವರಿಗೆ ಹಣದ ಅಮಲಿದೆ. ಮಂಜಪ್ಪ ಬಡವ ಎಂದು ಜನಗಳೇ ದೇಣಿಗೆ ಕೊಟ್ಟು ಬೆಂಬಲ ನೀಡುತ್ತಿದ್ದಾರೆ. ಐವತ್ತು ಸಾವಿರ ಮತಗಳ ಅಂತರದಿಂದ ಗೆಲುವು ಪಡೆಯುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT