ಅನ್ನಪ್ರಸಾದ ವ್ಯರ್ಥಮಾಡಬೇಡಿ: ಸಾಣೇಹಳ್ಳಿ ಶ್ರೀ ಸಲಹೆ

7

ಅನ್ನಪ್ರಸಾದ ವ್ಯರ್ಥಮಾಡಬೇಡಿ: ಸಾಣೇಹಳ್ಳಿ ಶ್ರೀ ಸಲಹೆ

Published:
Updated:
Prajavani

ಮಲೇಬೆನ್ನೂರು: ಮಕ್ಕಳು ವಿವಿಧ ಕಾರಣಗಳಿಂದ ದಾರಿ ತಪ್ಪುತ್ತಿದ್ದು, ಪೋಷಕರು, ಶಿಕ್ಷಕರು ಎಚ್ಚರವಹಿಸಿ ಅವರನ್ನು ಸರಿದಾರಿಗೆ ತನ್ನಿ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಸಮೀಪದ ಕುಂಬಳೂರಿನ ಬಸವ ಗುರುಕುಲದ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮಕ್ಕಳಲ್ಲಿ ಅಂತರಂಗದ ಜ್ಞಾನ ಇರುತ್ತದೆ. ಸಮರ್ಪಕವಾಗಿ ಬಳಸಿದರೆ ಒಳಿತಾಗುತ್ತದೆ ಎಂದರು.

ಮನೆ, ಶಾಲೆ, ಕಲ್ಯಾಣ ಮಂದಿರ ಎಲ್ಲಿಯೇ ಆದರೂ ಅನ್ನ ಪ್ರಸಾದ ವ್ಯರ್ಥಮಾಡಬೇಡಿ. ಪ್ರಸಾದವನ್ನು ತಿನ್ನುವ ಹಕ್ಕು ಇದೆಯೇ ಹೊರತು, ವ್ಯರ್ಥಮಾಡಲು ಅಲ್ಲ ಎಂದು ತಿಳಿಸಿದರು.

ಕೆ. ತೀರ್ಥಪ್ಪ ಅಧ್ಯಕತೆ ವಹಿಸಿದ್ದರು. ಶಿಕ್ಷಕ ಹೂಗಾರ್, ಡಾ. ಬಿ. ಚಂದ್ರಶೇಖರ್ ಬಿಇಒ ನರಸಿಂಹಪ್ಪ, ವಕೀಲ ಎಚ್.ಬಿ. ಶಿವಕುಮಾರ್ ಮಾತನಾಡಿದರು.

ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಜನಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !