ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ | ದೊಂಡಿಯಾವಾಘ ಸಂಸ್ಮರಣೆ ಕಾರ್ಯಕ್ರಮ

Published 11 ಸೆಪ್ಟೆಂಬರ್ 2023, 5:17 IST
Last Updated 11 ಸೆಪ್ಟೆಂಬರ್ 2023, 5:17 IST
ಅಕ್ಷರ ಗಾತ್ರ

ಚನ್ನಗಿರಿ: ‘ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಪ್ರಪ್ರಥಮವಾಗಿ ಬ್ರಿಟಿಷರ್ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿದ ವೀರ ಸೇನಾನಿ ದೊಂಡಿಯಾವಾಘ ಅವರು ಚನ್ನಗಿರಿಯಲ್ಲಿ ಹುಟ್ಟಿರುವುದು ಈ ತಾಲ್ಲೂಕಿನ ಹೆಮ್ಮೆ’ ಎಂದು ಐಇಎಸ್ ಅಧಿಕಾರಿ ಭರತ್ ಮೋರೆ ತಿಳಿಸಿದರು.

ಪಟ್ಟಣದ ಕ್ಷತ್ರಿಯ ಮರಾಠ ಸಮಾಜ, ರಂಗಸೌರಭ ಕಲಾ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ ದೊಂಡಿಯಾವಾಘ ಅವರ 223ನೇ ಸಂಸ್ಮರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೊಂಡಿಯಾವಾಘ ಬ್ರಿಟಿಷರ ವಿರುದ್ಧ 90 ಸಾವಿರ ಸೈನಿಕರ ಸೈನ್ಯವನ್ನು ಕಟ್ಟಿಕೊಂಡು ಹೋರಾಟ ಮಾಡಿದ ವೀರ ಸೇನಾನಿ. ಕನ್ನಡ ನಾಡಿನ ಸಂರಕ್ಷಣೆ ಮಾಡುವುದು ಅವರ ಪ್ರಮುಖ ಗುರಿಯಾಗಿತ್ತು. ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಯಾವ ರಾಜ ಆಹ್ವಾನ ನೀಡಿದರೂ ದೊಂಡಿಯಾವಾಘ ತಮ್ಮ ಸೈನ್ಯವನ್ನು ತೆಗೆದುಕೊಂಡು ಹೋಗಿ ಹೋರಾಟ ಮಾಡುತ್ತಿದ್ದರು ಎಂದು ವಿವರಿಸಿದರು.

‘ಇಂದಿನ ಯುವ ಸಮೂಹ ಇತಿಹಾಸದ ಬಗ್ಗೆ ಅರಿವನ್ನು ಹೊಂದುವುದು ಅಗತ್ಯ. ಇತಿಹಾಸ ನಮ್ಮ ನಾಡಿನ ಗತ ವೈಭವವನ್ನು ನಮಗೆ ತಿಳಿಸಿಕೊಡುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ಮಹನೀಯರ ಬಗ್ಗೆ ತಿಳಿದುಕೊಳ್ಳುವುದೂ ಅಗತ್ಯ’ ಎಂದರು.

ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರ ಕುಮಾರ್ ಅಥರ್ಗಾ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಕೆಕೆಎಂಪಿ ಅಧ್ಯಕ್ಷ ಸತೀಶ್ ಪವಾರ್, ತಾಲ್ಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ನಿಂಗೋಜಿರಾವ್ ಕೇಸರ್ಕರ್, ಉಪಾಧ್ಯಕ್ಷ ಮಂಜೋಜಿರಾವ್ ಜಾಧವ್, ಚಿತ್ರದುರ್ಗ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಪಿ.ಎಂ. ಗಣೇಶಯ್ಯ, ವೀರಶೈವ ಸಮಾಜದ ಅಧ್ಯಕ್ಷ ಕೆ.ಪಿ.ಎಂ. ಸ್ವಾಮಿ, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಅಣ್ಣೋಜಿರಾವ್ ಪವಾರ್ ಇದ್ದರು. 

ಚನ್ನಗಿರಿಯಲ್ಲಿ ಭಾನುವಾರ ನಡೆದ ವೀರ ಸೇನಾನಿ ದೊಂಡಿಯಾವಾಘ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ಐಇಎಸ್ ಅಧಿಕಾರಿ ಭರತ್ ಮೋರೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು
ಚನ್ನಗಿರಿಯಲ್ಲಿ ಭಾನುವಾರ ನಡೆದ ವೀರ ಸೇನಾನಿ ದೊಂಡಿಯಾವಾಘ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ಐಇಎಸ್ ಅಧಿಕಾರಿ ಭರತ್ ಮೋರೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT